ಸ್ಟೇಟಸ್ ಕತೆಗಳು (ಭಾಗ ೪೩೪) - ಸಾಗುವುದು
"ಸರ್ ನಾನು ಜನರತ್ತ ಹೋಗಬೇಕೋ ಅಥವಾ ಜನರನ್ನು ನನ್ನ ಹತ್ರ ಸೆಳೆಯಬೇಕೋ, ಇದರಲ್ಲಿ ಯಾವುದನ್ನ ಮಾಡಿದರೆ ಒಳ್ಳೆಯದು"
"ನೋಡು ನೀನೊಂದು ಅಂಗಡಿಯನ್ನ ಹಾಕುತ್ತೀಯಾ, ಒಂದು, ಜನರಿಗೆ ಯಾವುದು ಅಗತ್ಯವಿದೆಯೋ ಅದೇ ಅಂಗಡಿಯನ್ನು ತೆರೆದು ಹೆಚ್ಚು ಜನ ಸೇರೋ ಕಡೆ ಹಾಕಿದಾಗ ಜನ ನಿನ್ನ ಕಡೆಗೆ ಬರ್ತಾರೆ ಅಥವಾ ಮತ್ತೊಂದು, ನೀನು ಅದ್ಭುತವಾದದ್ದನ್ನು ಎಲ್ಲರಿಗಿಂತಲೂ ವಿಶೇಷವಾದದ್ದನ್ನು ಕೊಡುತ್ತಿ ಅಂದಾಗ ನಿನ್ನ ಅಂಗಡಿ ಎಷ್ಟೇ ದೂರ ಇದ್ರು ಜನ ಅಲ್ಲಿಗೆ ಹುಡುಕಿಕೊಂಡು ಬರುತ್ತಾರೆ. ಇದರಲ್ಲಿ ನೀನು ಯಾವುದಾದರೂ ಒಂದು ಆಗಬೇಕು. ಅಂದರೆ ನಿನ್ನೊಳಗೆ ಒಂದಷ್ಟು ವಿಶೇಷ ಗುಣಗಳನ್ನು ಹೊಂದಿ ಎಲ್ಲರಿಗಿಂತ ವಿಭಿನ್ನವಾಗಿದ್ದಾಗ ಜನ ನಿನ್ನ ಬಳಿಗೆ ಬರುತ್ತಾರೆ ಅಥವಾ ಜನರಿಗೆ ಇಷ್ಟವಾಗುವ ಭಾವದಲ್ಲಿ ಅವರೊಳಗೆ ಒಬ್ಬನಾದರೆ ಇಷ್ಟಪಡುತ್ತಾರೆ. ಇದೆರಡನ್ನು ಬಿಟ್ಟು ಹೊಸ ತರಹದ ಯಾವುದೇ ಬದುಕು ನಮ್ಮಲ್ಲಿಲ್ಲ. ಯಾರಿಗೋ ಇಷ್ಟವಾಗುವ ಹಾಗೆ ನಮ್ಮನ್ನು ಒಗ್ಗಿಸಿಕೊಳ್ಳುವುದುಕ್ಕಿಂತ, ನಮ್ಮ ವಿಶೇಷಗುಣಗಳು ಅವರಿಗೆ ಇಷ್ಟವಾಗಿ ನಮ್ಮ ಜೊತೆಗೆ ಬಂದರೆ ಅದು ಸ್ವಲ್ಪ ವಿಭಿನ್ನ. ಆಯ್ಕೆಗಳು ನಿನ್ನದು, ಯೋಚನೆ ಕೂಡ ನಿನ್ನದು. ಅದಕ್ಕೋಸ್ಕರ ಇನ್ಯಾರದೋ ಅನುಮತಿ ಕೇಳುವುದು ಸರಿಯಲ್ಲ. ಅಂತ ನನ್ನ ಅಭಿಪ್ರಾಯ. ನಿನ್ನಿಷ್ಟ, ನಿನ್ನ ನಿರ್ಧಾರ, ನಿನ್ನ ಜೀವನ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ