ಸ್ಟೇಟಸ್ ಕತೆಗಳು (ಭಾಗ ೪೩೮) - ಮುಖ್ಯ
ಯಾವುದು ಮುಖ್ಯ. ಗಿಡದ ಬುಡಕ್ಕೆ ಬೀಳುವ ಗೊಬ್ಬರವೋ, ಮರದ ತುದಿಯಲ್ಲಿ ಮಿನುಗಿ ಹಸಿರಾಗಿ ಕಂಗೊಳಿಸುವ ಚಿಗುರೋ, ಗಟ್ಟಿಯಾಗಿ ನಿಲ್ಲಿಸಿದ ಕಾಂಡವೋ, ಭದ್ರ ಪಡಿಸಿರುವ ಬೇರೋ ಇಲ್ಲಿ ಮುಖ್ಯ ಯಾವುದು? ಒಂದು ಗಿಡ ಅನ್ನೋದು ಎಲ್ಲರಿಗೂ ಪರಿಚಿತವಾಗಿ ತನ್ನದೇ ಒಂದು ಸ್ಥಾನವನ್ನು ಪಡೆಯಬೇಕು ಅಂತಾದಾಗ ಮುಖ್ಯ ಯಾವುದು? ಬೇರು ತುಂಬಾ ಮುಖ್ಯ ಅನ್ಸುತ್ತೆ, ಬರೀ ಬೇರಿದ್ದು ಕಾಂಡ ಗಟ್ಟಿಯಾಗಿಲ್ಲವಾದರೆ, ಎಲೆಗಳಿಗೆ ಆಹಾರ ಗೊಬ್ಬರದಿಂದ ಸಿಗಬೇಕಲ್ಲ, ಹೂವನ್ನು ಬಿಡದಿದ್ದರೆ ಮರ ವ್ಯರ್ಥ ಅಂದುಕೊಳ್ಳುತ್ತಾರೆ? ಹೀಗೆ ಪ್ರತಿಯೊಂದು ಮಹತ್ವವೇ. ಗಿಡ ಮರವಾಗಲು ಅದಕ್ಕೆ ಪ್ರತಿಯೊಂದು ಸಣ್ಣ ಹಂತವು ತನ್ನ ತನ್ನ ಕಾರ್ಯವನ್ನು ಶ್ರದ್ಧೆಯಿಂದ ಮಾಡಿದ್ದಕ್ಕೆ ಎಲ್ಲರಿಗೂ ಪರಿಚಿತವಾಗಿದೆ. ಊರಮುಂದೆ ತಲೆಯೆತ್ತಿ ನಿಂತಿದೆ. ನಮ್ಮ ಪ್ರತಿಯೊಂದು ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಾ ಹೋದರೆ ಗೆಲುವಿನ ಗುರಿಯು ಹತ್ತಿರಕ್ಕೆ ಬಂದು ಬಿಡುತ್ತದೆ. ಸುಲಭದಲ್ಲಿ ಸಾಧ್ಯವಾಗುತ್ತದೆ. ಯಾವುದೋ ಒಂದರ ಕಡೆಗಿನ ಹೆಚ್ಚಿನ ಆಸಕ್ತಿ ನಮ್ಮನ್ನ ಮತ್ತೆ ಅವನತಿಯ ಕಡೆಗೆ ಕೊಂಡೊಯ್ಯುತ್ತದೆ. ಪ್ರತಿಯೊಂದು ಮುಖ್ಯವೇ ಯಾವ ಸಂದರ್ಭದಲ್ಲಿ ಯಾವುದನ್ನು ಹೇಗೆ ಬೆಳಸಬೇಕು ಅನ್ನೋದು ನಮ್ಮ ಅರಿವಿನಲ್ಲಿ ಇರಬೇಕು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ