ಸ್ಟೇಟಸ್ ಕತೆಗಳು (ಭಾಗ ೪೩೯) - ಬದುಕು

ಸ್ಟೇಟಸ್ ಕತೆಗಳು (ಭಾಗ ೪೩೯) - ಬದುಕು

ಆಕೆಯ ಆಸ್ಪತ್ರೆ ಬಳಿಗೆ ಬಂದಳು , "ಏನಾಯ್ತು"

"ನಿಮ್ಮ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ" 

"ಹೋ ಹೌದಾ ಇಷ್ಟು ಸಮಯ ಬೇಕಾಯಿತಾ, ಸರಿ ನೀವೆಲ್ಲಾದರೂ ಮಣ್ಣು ಮಾಡುವುದಾದರೆ ಮಾಡಿ ನನಗೆ ತುಂಬ ವರ್ಷದ ಹಿಂದೆಯೇ ಸತ್ತುಹೋಗಿದ್ದಾನೆ" ಹೀಗೊಂದು ನಡೆದೇಬಿಟ್ಟರು. ಆ ತಾಯಿಯ ಮನಸ್ಸಿನಲ್ಲಿ ಮಗನ ಬಗ್ಗೆ ಇಂಥ ಆಲೋಚನೆ ಬರಬೇಕೆಂದರೆ ಮಗ ಅನ್ನುವ ಹೆಸರಿಗೆ ಆತ ಕಳಂಕ ಎಂದೇ ನನ್ನ ಅನಿಸಿಕೆ. ಆತ ಸೇತುವೆ ಬಳಿ ಹೋಗುತ್ತಿದ್ದವನು ಅಲ್ಲೇ ಗಾಡಿ ನಿಲ್ಲಿಸಿ ತನ್ನಲ್ಲಿರುವ ಎಲ್ಲ ವಸ್ತುಗಳನ್ನು ಸೇತುವೆ ಪಕ್ಕದಲ್ಲಿಟ್ಟು ನೇರವಾಗಿ ನದಿಗೆ ಹಾರಿಬಿಟ್ಟ. ತಾಯಿಯಂತಹ ನದಿ ಕೂಡ ಆತನ ಬದುಕಿಸುವ ಯಾವ ಆಲೋಚನೆಯನ್ನು ಮಾಡದೇ ಕ್ಷಣದಲ್ಲಿ ತನ್ನೊಳಗೆ ತೆಗೆದುಕೊಂಡು ಜೀವವನ್ನ ಹೀರಿ ಬರಿಯ ದೇಹವನ್ನ ತೇಲಿಬಿಟ್ಟಿತು. ಯಾರಿಗೂ ಸಿಕ್ಕಿದ ದೇಹ ಆಸ್ಪತ್ರೆಯ ಬಳಿಗೆ ಬಂದು ಗುರುತಿಲ್ಲದವರು ತಾಯಿಗೆ ತಿಳಿಸಿದಾಗ ತಾಯಿ ಬಂದು ಮುಖ ನೋಡಿ ಸತ್ತಿರುವುದನ್ನು ರುಜುವಾತು ಮಾಡಿ ಅಲ್ಲಿಂದ ಹೊರಟು ಬಿಟ್ಟಳು. 

ತಾಯಿಗೆ ಎಷ್ಟು ನೋವಾಗಿರಬೇಕು. ಮಗ ಸತ್ತಿದ್ದಾನೆ ಅನ್ನೋದನ್ನ ಕೇಳಲ್ಲ. ಬದುಕಿರುವಾಗಲೇ ನೋವು ಕೊಟ್ಟಿದ್ದಕ್ಕೆ, ಮಾಡಬಾರದು ಮಾಡಿ ಕೇಳಬಾರದ ಹೆಸರಲ್ಲಿ ಎಲ್ಲರ ಬಾಯಲ್ಲಿ ತುಚ್ಚವಾಗಿ ಕಂಡು ಇಂತಹ ಮಗನಿಗೆ ಯಾಕೆ ಜನ್ಮ ಕೊಟ್ಟೆ ಅನ್ನುವಂತಹ ಭಾವ ತಾಯಿಯ ಮನಸ್ಸಲ್ಲಿ, ದಿನವೂ ಕಣ್ಣೀರಲ್ಲಿ ಬದುಕುವಾಗ ಇಂದಿನಿಂದ ಒಂದಷ್ಟು ನೆಮ್ಮದಿಯ ಉಸಿರನ್ನು ಬಿಡಬಹುದು. 

ನಾವು ಅಂದುಕೊಂಡಿದ್ದೇವೆ ನನ್ನ ಬದುಕು ನನ್ನ ಇಷ್ಟ ಅಂತ. ಆದರೆ ಅದರ ಜೊತೆಗೆ ನಮ್ಮನ ನಂಬಿದವರು ಹಲವಾರು ಮಂದಿ ಇರುತ್ತಾರೆ ಎಲ್ಲರೂ ನಮ್ಮ ಮೇಲೆ ಕನಸಿನ ಮೂಟೆಗಳನ್ನು ಭರವಸೆಯ ಆಸೆಗಳನ್ನು ಹೊಂದಿರುತ್ತಾರೆ. ಅವುಗಳಿಗೆ ಮೋಸ ಮಾಡಿ ಮುಂದುವರಿಯುವುದು ನಮ್ಮ ತಪ್ಪು. ಹಾಗಾಗಿ ಬದುಕು ಎಚ್ಚರವಿರಬೇಕು ತಪ್ಪಿದರೆ ಅನಾಹುತವಾದೀತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ