ಸ್ಟೇಟಸ್ ಕತೆಗಳು (ಭಾಗ ೪೪೧) - ನಾನು

ಸ್ಟೇಟಸ್ ಕತೆಗಳು (ಭಾಗ ೪೪೧) - ನಾನು

ನಾನು ಎಂದರೆ ಯಾರು? ಅಂದ್ರೆ ನನ್ನ ಹೆಸರೋ, ನನ್ನ ಕೇಶರಾಶಿಯೋ? ನನ್ನ ದಂತಪಂಕ್ತಿಗಳೋ? ನನ್ನ ಕೆನ್ನೆಯ ಮೇಲಿನ ಗುಳಿಯೋ? ನಾ ನಡೆವ ನಡಿಗೆಯೋ? ನಾನು ಧರಿಸಿದ ಬಟ್ಟೆಯೋ? ನನ್ನ ಹೆತ್ತವರೋ? ಅಥವಾ ಬೆಳಗ್ಗೆ ಎದ್ದಾಗ ಗಡುಸಾಗಿರುವ ನನ್ನ ಧ್ವನಿ, ನಾನಾಡುವ ಮಾತು, ನಾನು ಬಯಸುವ ನನ್ನ ಏಕಾಂತ, ಕದ್ದುಮುಚ್ಚಿ ನನಗಷ್ಟೇ ಗೊತ್ತಿರುವ ನನ್ನೊಳಗಿನ ಸತ್ಯ, ಹಿಡಿದಿಟ್ಟುಕೊಂಡಿರುವ ಸಣ್ಣ ಮುಗುಳ್ನಗು, ನನಗೆ ಇಷ್ಟವಾದವರ ಮನಸ್ಸಿನೊಳಗಿನ ಪಟ್ಟಿ, ನಾನೊಬ್ಬನೇ ಹಾಡಿದ ಹಾಡು, ನನ್ನೊಳಗೆ ಉಂಟಾದ ಸಣ್ಣ ಕೋಪ, ನನಗಿಷ್ಟವಾದ ಪುಟ್ಟ ಪ್ರಪಂಚ, ನಾನು ಬಯಸುವ ಹರ್ಷ, ನಾನು ಬಯಸುವ ಮಾತು, ಇದೆಲ್ಲವು ಸೇರಿ ನಾನಾಗಿರುತ್ತೇನೆ ಅಂತ ನನಗನಿಸುತ್ತೆ. ಮೊದಲಿನದಕ್ಕಿಂತ ಎರಡನೆಯದರಲ್ಲಿ ನಾನು ನಾನಾಗಿರುತ್ತೇನೆ. ನಾನು ನಾನಾಗಿರದಿದ್ದರೆ ನಾನು ಅನ್ನೋದಕ್ಕೆ ಅರ್ಥ ಇರೋದಿಲ್ಲ. ಯಾರದೋ ಮುಂದೆ ನಾನು  ಅಲ್ಲವಾಗಿರುವವುದನ್ನ ತೋರಿಸಬೇಕಾಗಿದೆ. ನಾನು ನಾನಾಗಿದ್ದರೆ ಎಲ್ಲರೂ ಒಪ್ಪಿಕೊಳ್ಳಬೇಕಾಗಿಲ್ಲ. ಆದರೆ ನನ್ನೊಳಗಿನ ನಾನು ನನ್ನನ್ನು ನಾನಾಗಿರಲು ಬಿಟ್ಟರೆ  ನನ್ನ ಬದುಕು ನನ್ನದಾಗಿರುತ್ತದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ