ಸ್ಟೇಟಸ್ ಕತೆಗಳು (ಭಾಗ ೪೪೪) - ಸೈನಿಕ

ಸ್ಟೇಟಸ್ ಕತೆಗಳು (ಭಾಗ ೪೪೪) - ಸೈನಿಕ

ಈ ಸೈನಿಕ ಅನ್ನುವ ಪದವೇ ಅದ್ಭುತ. ಇವತ್ತು ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸೈನಿಕನ ಬಗೆಗಿರುವ ಸಣ್ಣ ಕಥಾನಕವನ್ನು ಪ್ರಸ್ತುತಪಡಿಸಿದರು. ಅದನ್ನು ನೋಡುವಾಗಲೇ ಕಥೆಯ ಅಂತ್ಯ ಏನು ಅನ್ನೋದು ಮೊದಲೇ ತಿಳಿದಿತ್ತು. ಆದರೂ ಪ್ರತಿಯೊಂದು ಕ್ಷಣವೂ ರೋಮಾಂಚನವನ್ನು ಉಂಟು ಮಾಡುತ್ತಿತ್ತು. ಕಣ್ಣಿಂದ ಹನಿ ನೀರು ತಟ್ಟನೆ ಜಾರಿ ಕೆಳಗೆ ಬಿದ್ದಿತ್ತು. ನನಗೆ ಗೊತ್ತಿದೆ ಮುಂದಿನ ಕಥೆ ಏನು ಅನ್ನೋದು ಇದನ್ನೇ ತುಂಬಾ ಸಲ ನೋಡಿದ್ದೇನೆ. ಹಾಗಿರುವಾಗ ಮತ್ತೆ ಮತ್ತೆ ಅದೇ ದೃಶ್ಯ ಮನಸ್ಸಿನೊಳಗೆ ಅದೇ ಕಂಪನವನ್ನು ಅದೇ ರೀತಿಯ ಕಣ್ಣಹನಿಯನ್ನು ಉಂಟು ಮಾಡುವುದಾದರೂ ಹೇಗೆ ? ನನಗನ್ನಿಸುತ್ತೆ ಯಾವ ವಿಚಾರ ನಮ್ಮ ಎದೆಯೊಳಗೆ ಭದ್ರವಾಗಿ ನಿಲ್ಲುತ್ತೋ ಅದು ಪ್ರತಿಸಲವೂ ನಮ್ಮೊಳಗೆ ಭಾವನೆಯನ್ನು ಉಂಟು ಮಾಡುತ್ತೆ. ಬರಿಯ ಯೋಚನೆಯಲ್ಲಿ ಇರೋದು ಹಾಗೆ ದಾಟಿ ಮುಂದೆ ಹೋಗಿ ಬಿಡುತ್ತೆ.

ಹಾಗಾಗಿ ನಾನು ಅನ್ನುವಾಗ ಪ್ರತಿಯೊಬ್ಬರ ಕೈ ಎದೆಯ ಮೇಲೆ ಹೋಗುತ್ತದೆ. ಪ್ರತಿಯೊಬ್ಬರೂ ಬದುಕೋದು ಅದೇ ಎದೆಯೊಳಗಿನ ಉಚ್ವಾಸ ನಿಶ್ವಾಸಗಳಿಂದ. ನನಗೆ ಇವತ್ತು ಸೈನಿಕ ಮನದೊಳಗೆ ಮತ್ತೆ ಗಟ್ಟಿಯಾಗಿ ಬೇರೂರಿದ. ನಿಮಗೇ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ