ಸ್ಟೇಟಸ್ ಕತೆಗಳು (ಭಾಗ ೪೪೬) - ಸಾರ್ಥಕ

ಸ್ಟೇಟಸ್ ಕತೆಗಳು (ಭಾಗ ೪೪೬) - ಸಾರ್ಥಕ

ಬದುಕು ಸಾರ್ಥಕ ಅನಿಸಿಕೊಳ್ಳುವುದು ಆರೈಕೆ ಮಾಡೋರು ಜೊತೆಯಿದ್ದಾರೆ ಅನ್ನಿಸಿದಾಗ. ಎಲ್ಲೋ ಮೂಲೆಯಲ್ಲಿ ಒಂಟಿಯಾಗಿ ಬದುಕುತ್ತಿದ್ದವವರ ಕಷ್ಟಗಳಿಗೆ ಹೆಗಲು ಕೊಡುತ್ತಾರೆ, ನೋವುಗಳಿಗೆ ಕಣ್ಣೀರು ಸುರಿಸುತ್ತಾರೆ, ಆರೋಗ್ಯ ಕೆಟ್ಟಾಗ ಮದ್ದು ಕೊಟ್ಟು ಜೊತೆಗೆ ನಿಲ್ಲುತ್ತಾರೆ, ಪ್ರೀತಿಯಿಂದ ಕುಶಲೋಪರಿ ವಿಚಾರಿಸಿ ಆದಷ್ಟು ಬೇಗ ಆರೋಗ್ಯ ಸರಿಯಾಗಲು ಹಾರೈಸುತ್ತಾರೆ, ದೂರದೂರುಗಳಿಗೆ ಚಲಿಸುವಾಗ ಅವರೇ ಬಂದು ಬಸ್ಸನ್ನೇರಿಸಿ ಕೈಬೀಸಿ ಕಳಿಸುತ್ತಾರೆ, ಹೀಗೆ ಆಗಾಗ ಒಂಟಿ ಎಂಬ ಭಾವ ಮೂಡಿದಾಗ ನಮ್ಮ ಜೊತೆಗೆ ನಿಲ್ಲುವವರು ಇರುತ್ತಾರೆ ಎಂದಾಗ ಮನಸ್ಸಿಗೆ ಒಂಥರಾ ಸಮಾಧಾನ. ಜೀವನದಲ್ಲಿ ಏನೋ ಸಂಪಾದಿಸಿದ್ದೇನೆ ಎನ್ನುವ ಹೆಮ್ಮೆ. ಹಲವು ಸಲ ನೋವುಗಳು ಹೆಚ್ಚಾಗುವುದು, ಕಣ್ಣೀರು ಇಳಿಯುತ್ತಾನೆ ಇರುವುದು, ಒಂಟಿ ಎಂಬ ಭಾವ ಮತ್ತೆ ಮತ್ತೆ ಕಾಡೋದು ಜೊತೆಗೆ ಯಾರು ಇಲ್ಲ ಅಂದಾಗ ಮಾತ್ರ. ಸುತ್ತಮುತ್ತ ನಮ್ಮೂರು ಅನ್ನೋರು ನಿಂತಿರುತ್ತಾರೆ ಅಂದರೆ ಯಾವುದು ದೊಡ್ಡ ಸಮಸ್ಯೆ ಅನಿಸುವುದಿಲ್ಲ .ಅವೆಲ್ಲವೂ ಕ್ಷಣದಲ್ಲಿ ಮಾಯವಾಗಿಬಿಡುತ್ತದೆ ಅನ್ನುವ ಧೈರ್ಯ ಮೂಡುತ್ತದೆ. ನಮ್ಮಿಂದ ಸಹಾಯ ಸಿಗದಿದ್ದರೂ ನಮಗೂ ಸಹಾಯ ಮಾಡಿದರಲ್ಲ ,ಪ್ರತಿಫಲಾಪೇಕ್ಷೆಯಿಲ್ಲದೆ ಪ್ರೀತಿಯಿಂದ ಪಕ್ಕದಲ್ಲಿ ಇದ್ರಲ್ಲ ಅದು ಬದುಕಿನ ಅದ್ಭುತ ಕ್ಷಣಗಳನ್ನು ಸುಂದರವಾಗಿಸುತ್ತೆ. ಇನ್ನಷ್ಟು ದಿನ ಬದುಕಬೇಕು  ಅನ್ಸುತ್ತೆ ......ನಿಮಗೆ

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ