ಸ್ಟೇಟಸ್ ಕತೆಗಳು (ಭಾಗ ೪೫೪) - ಹಸಿವು

ಸ್ಟೇಟಸ್ ಕತೆಗಳು (ಭಾಗ ೪೫೪) - ಹಸಿವು

ನಡೆದು ಬರುತ್ತಿರುವ ಇಬ್ಬರಿಗೂ ಬೇಡುವ ಮನಸ್ಸಿಲ್ಲ. ಆದರೆ ಹೊಟ್ಟೆ ಕೇಳಬೇಕಲ್ಲ. ವಯಸ್ಸು ತುಂಬಾ ಸಣ್ಣದು ಮನೆಯಲ್ಲಿ ಮಲಗೋಕೆ ಒಂಚೂರು ಜಾಗ ಸಿಗುತ್ತೆ. ಸ್ವಂತದವರು ಅನ್ನೋಕೆ ಯಾರು ಇಲ್ಲ. ಅವರು ಯಾರು ಹೊಟ್ಟೆಗೆ ಬೇಕಾದಷ್ಟು ಅನ್ನವನ್ನು ನೀಡುವುದಿಲ್ಲ. ಹಾಗಿದ್ದಾಗ ಬೇಡಲೇ ಬೇಕಷ್ಟೇ. ಕೆಲಸ ಮಾಡೋಣ ಅಂತ ಅಂದ್ರೆ ಇವರ ವಯಸ್ಸಿಗೆ ಮಾಡುವಂತಹ ಕೆಲಸವೇ ಇಲ್ಲ. ದೇಹ ಹಸಿವಿನಿಂದ ನಡುಗುತ್ತಿದೆ. ಮುಖದಲ್ಲಿ ಅಂದದ ನಗುವಿದ್ದರೂ ಹಲವು ದಿನಗಳ ನೀರಿಲ್ಲದ ಮುಖವು ಬಾಡಿಹೋಗಿದೆ. 

ಹೊಟ್ಟೆಯೊಳಗೆ ಖಾಲಿಯಾದ ಕಾರಣ ಮುಖ ಕಾಂತಿಯನ್ನು ಕಳೆದುಕೊಂಡಿದೆ. ಅದಕ್ಕಾಗಿ ಎಲ್ಲರ ಕಣ್ಣನ ಗಮನಿಸ್ತಾ ಬೇಡುತ್ತಿದ್ದಾರೆ. ಕೈಯೊಡ್ಡಿದ ಕಡೆಯಲ್ಲ ಹೊಟ್ಟೆಗೆ ಏನೋ ಸಿಗುತ್ತೆ ಅನ್ನುವ ಭಾವ ಅವರಿಬ್ಬರದ್ದೂ. ಆದರೆ ಹೆಚ್ಚಿನವರೆಲ್ಲ ನೋಡಿ ಹೊರಟು ಹೋಗುತ್ತಿದ್ದಾರೆ. ಯಾರಿಗೂ ಎರಡು ಮಕ್ಕಳ ಹೊಟ್ಟೆ ಕಾಣುತ್ತಿಲ್ಲ. ಕಸ ಆಯುತ್ತಿದ್ದ ಹೆಂಗಸು ಒಬ್ಬಳು  ಬಂದು 2 ಬಿಸ್ಕಿಟ್ ಪೊಟ್ಟಣಗಳನ್ನು ನೀಡಿ ಹೊರಟುಹೋದಳು. ಅವಳಿಗೆ ಈ ಹಸಿವಿನ ಅರಿವಿತ್ತು ಅಂತ ಕಾಣುತ್ತೆ. ಮಕ್ಕಳಿಬ್ಬರ ಮುಖದಲ್ಲಿ ನಗು ಮೂಡಿತು. ಯಾರ ಬಳಿ ಬೇಡಬೇಕು ಅನ್ನುವ ಅರಿವು ಗೊತ್ತಾಯಿತು. ಹಾಗಾಗಿ ಯಾರ ಮುಖದಲ್ಲಿ ಹಸಿವಿದೆಯೋ ಅವರ ಬಳಿ ಬೇಡಲು ಹೊರಟಿದ್ದಾರೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ