ಸ್ಟೇಟಸ್ ಕತೆಗಳು (ಭಾಗ ೪೫೯) - ಆಯ್ಕೆ
ಕಿವಿಗಳೆರಡಿವೆ ಜಾಸ್ತಿ ಕೇಳಬೇಕಂತೆ ಹಾಗಾಗಿ ನಾನು ಕಿವಿಗಳನ್ನ ತೆರೆದಿರುತ್ತೇನೆ. ಮಾತುಗಳನ್ನ ಕೇಳುತ್ತೇನೆ, ಕೆಲವನ್ನ ಆಲಿಸುತ್ತೇನೆ. ಆಲಿಸಿದ ಮಾತುಗಳನ್ನ ನಿಮ್ಮ ಮುಂದಿಡಬೇಕು ಅನ್ನಿಸಿತು. " ನಾವು ಗುರುತಿಸಿಕೊಳ್ಳಬೇಕು, ನಮ್ಮ ಜೀವನದ ಅಗತ್ಯಗಳು ಯಾವುದು? ಮೊದಲ ಹಂತದ ಪ್ರಾಶಸ್ತ್ಯ ಯಾವುದು ನಂತರ ಯಾವುದು ಅಂತಾ, ಇಲ್ಲವಾದರೆ ತೊಂದರೆ ಅನುಭವಿಸೋರು ನಾವೇ, ಒಂದೇ ಕ್ಷಣದಲ್ಲಿ ಎರಡು ವಿಚಾರಗಳು ಎದುರಾದಾಗ ನಾವು ಯಾವುದನ್ನ ಆಯ್ಕೆ ಮಾಡುತ್ತೇವೆ ಅನ್ನೋದು ನಮ್ಮ ಭವಿಷ್ಯದ ಬದುಕಿಗೆ ಕಾರಣವಾಗಿರುತ್ತದೆ . ದುಡ್ಡಿಲ್ಲಾ ನೀಡೋದಕ್ಕೆ, ಆಲೋಚನೆಗಳೂ ಇಲ್ಲವಾದಾಗ ಸಮಯವಾದರೂ ನೀಡಬೇಕು. ಅದು ಯಾರ ಬದುಕಿಗೋ ಒಂದಷ್ಟು ನೆಮ್ಮದಿಯ ಉಸಿರಾಟವನ್ನು ನೀಡಬಹುದು. ಎಲ್ಲಾ ಆಯ್ಕೆಗಳು ನಮ್ಮ ಕೈಯಲ್ಲಿ ಇವೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ