ಸ್ಟೇಟಸ್ ಕತೆಗಳು (ಭಾಗ ೪೬೭) - ಕತ್ತಲೆ- ಬೆಳಕು
ಮನೆ ಕಡೆಗೆ ಬೈಕನ್ನೇರಿ ಹೊರಟ್ಟಿದ್ದೆ. ದಾರಿ ತುಂಬಾ ಸಾಲು-ಸಾಲು ಕಂಬಗಳನ್ನು ನೆಟ್ಟಿದ್ದರು. ಪ್ರಕಾರವಾಗಿ ಬೆಳಕನ್ನು ಬೀರುತ್ತಲೇ ನಿಂತಿದ್ದವು. ನನಗೆಲ್ಲೂ ಕತ್ತಲೆಯ ಅನುಭವವೇ ಸಿಗಲಿಲ್ಲ. ಬೆಳಗಿನ ಹೊತ್ತಲ್ಲೇ ಗಾಡಿ ಓಡಿಸುತ್ತಿದ್ದೇನೆ ಎನ್ನುವ ಸಂಭ್ರಮ ಮನೆಮಾಡಿತ್ತು. ಅದೇ ವೇಗದಲ್ಲಿ ಗಾಡಿಯನ್ನು ಓಡಿಸುತ್ತಲೇ ಬಂದೆ, ಯಾವುದೇ ಬೆಳಕಿನ ಅವಶ್ಯಕತೆ ಬೇಡ ಅಂತ ಅನ್ನಿಸಿಬಿಟ್ಟಿತ್ತು. ಆದರೆ ಆ ಒಂದು ತಿರುವು ದಾಟಿದ ಕೂಡಲೇ ಅಲ್ಲಿ ಪೂರ್ತಿ ಕತ್ತಲೆ ಯಾವುದೇ ಬೆಳಕಿನ ಸುಳಿವಿಲ್ಲ. ಗಾಡಿಯ ಬೆಳಕಿಲ್ಲದಿದ್ದರೆ ಮುಂದೆ ಸಾಗುವುದೇ ಕಷ್ಟ. ಮುಂದೇನು ಇದೆ ಅನ್ನೋದು ಚೂರು ಕಾಣುತ್ತಿಲ್ಲ. ಆ ಕ್ಷಣದಲ್ಲಿ ಆ ಬೀದಿ ದೀಪದ ಮಹತ್ವ ಏನು ಅಂತ ತಿಳಿಯಿತು. ಅಷ್ಟರವರೆಗೆ ಅಂದುಕೊಂಡಿದ್ದೆ ಆದರೆ ಕತ್ತಲು ತೀವ್ರವಾದಷ್ಟು ಬೆಳಕಿನ ಅವಶ್ಯಕತೆ ತುಂಬಾ ಇರುತ್ತದೆ. ಕೆಲವೊಂದು ಸಲ ಬೆಳಕಿನ ಮೌಲ್ಯ ಅರಿವಾಗುವುದಿಲ್ಲ. ಕತ್ತಲೆ ಜೊತೆಗಿದ್ದಾಗ ಮಾತ್ರ ಬೆಳಕಿಗೆ ಒಂದಷ್ಟು ಮೌಲ್ಯ ಸಿಗುತ್ತದೆ. ಹಾಗಾಗಿ ಅದನ್ನೇ ನಂಬ ಹೊರಟಿದ್ದೇನೆ. ಕತ್ತಲು-ಬೆಳಕು ಎರಡು ಬದುಕಿನಲ್ಲಿ ಬೇಕು. ಕಷ್ಟಸುಖ, ನೋವು ನಲಿವಿನ ಹಾಗೆ. ಯಾವುದೋ ಒಂದೇ ಸಿಕ್ಕಿಬಿಟ್ಟರೆ ಅದು ಬದುಕೇ ಅಲ್ಲ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ