ಸ್ಟೇಟಸ್ ಕತೆಗಳು (ಭಾಗ ೪೬೯) - ಕಳೆದುಕೊಂಡವರು
ಕಳೆದುಕೊಂಡವರು ಯಾರು ? ಆ ದಿನ ಅವನ ಪ್ರಾಣ ಹೋಗಿತ್ತು. ವಿರೋಧಿಗಳ ಬಣದಲ್ಲಿ ಸಿಟ್ಟು ಹೆಚ್ಚಾಗಿ ಪ್ರಾಣವೇ ತೆಗೆಯುವ ಯೋಚನೆ ಮಾಡಿ ಉಸಿರು ನಿಲ್ಲಿಸಿದ್ದರು ಅವನದ್ದು. ಅದು ಊರೆಲ್ಲ ಸುದ್ದಿಯಾಯಿತು
ಎಲ್ಲಾ ಕಡೆಯೂ. ಅವನನ್ನ ಕಳೆದುಕೊಂಡ ನೋವಿನ ಬಗ್ಗೆ ಎಲ್ಲರೂ ಮಾತನಾಡಿದರು. ಆದರೆ ನಿಜವಾದ ನೋವು ಮತ್ತು ನಿಜವಾಗಿಯೂ ಕಳೆದುಕೊಂಡವರು ಅವನ ಮನೆಯವರು ಮಾತ್ರ. ಅವರ ಬದುಕಿನ ಆಸೆಗಳು, ಬದುಕಿನ ಕನಸುಗಳು, ಪ್ರತಿ ದಿನ ರಾತ್ರಿ ಊಟ ಮಾಡುತ್ತಿದ್ದಾಗ ಜೊತೆಯಾಗಿ ಮಾತನಾಡುತ್ತಿದ್ದ ಮಾತುಗಳು, ದೂರದೂರಿಗೆ ಪ್ರವಾಸ ಹೊರಟಾಗ ಹರಟುತ್ತಿದ್ದ ಖುಷಿಯ ಮೆಲುಕುಗಳು, ಇದನ್ನು ಅವರು ಕಳೆದುಕೊಂಡವರು .
ಇಲ್ಲಿ ಮಾತಿಗೆ ಎಲ್ಲರೂ ಹೇಳುತ್ತಾರೆ ನಾವು ಕಳೆದುಕೊಂಡಿದ್ದೇವೆ ಅಂತ, ಆದರೆ ನಿಜವಾಗಿಯೂ ಕಳೆದುಕೊಂಡವರು ಅವನ ಮನೆಯವರು ಮಾತ್ರ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ