ಸ್ಟೇಟಸ್ ಕತೆಗಳು (ಭಾಗ ೪೭೧) - ಬಾಕಿ
ಬಾಕಿ ಉಳಿಸಿಕೊಳ್ಳಬಾರದು. ನಾವು ತುಂಬ ಕಡೆಯಿಂದ ಪಡೆದುಕೊಂಡಿರುತ್ತೇವೆ. ಪಡೆದುಕೊಂಡಿರುವುದನ್ನು ಮತ್ತೆ ತಿರುಗಿ ನೀಡಬೇಕು. ಅದು ನೆನಪಿನಿಂದ. ಕೆಲವೆಡೆಯಿಂದ ಪ್ರೀತಿ, ಕೆಲವು ಕಡೆಯಿಂದ ಸಹಕಾರ, ಮಮತೆ, ಧೈರ್ಯ, ಪ್ರೋತ್ಸಾಹ, ಹುಮ್ಮಸ್ಸು, ಸ್ಪೂರ್ತಿ ಹೀಗೆ ಬೇರೆ ಬೇರೆ ಕಡೆಯಿಂದ ನಮ್ಮ ಬದುಕಿನ ದಾರಿ ಇನ್ನೊಂದು ಹೆಜ್ಜೆಯನ್ನು ಇಡೋದಕ್ಕೆ ಬೆಂಗಾವಲಾಗಿ ಒಂದಷ್ಟು ಭಾವಗಳು ನಮ್ಮನ್ನ ಮೇಲೆತ್ತಿರುತ್ತವೆ. ನಾವು ಮುಂದುವರೆಯುತ್ತಾ ಹೋದ ಹಾಗೆ ನಾವದನ್ನ ಬಳಸಿದ್ದೇವೆ, ತಿರುಗಿ ನೀಡುವಾಗ ಬಡ್ಡಿ ಸಮೇತ ನೀಡಲಾಗದಿದ್ದರೂ, ಕೊಟ್ಟ ಅಸಲನ್ನಾದರೂ ನೀಡಿದರೆ, ನೀಡಿದವರಿಗೂ ಒಂದು ನೆಮ್ಮದಿ. ಅವರ ಬದುಕಿಗೂ ಇದರ ಅವಶ್ಯಕತೆ ಇರುತ್ತದೆ. ಬಾಕಿ ಉಳಿಸಿಕೊಳ್ಳಬಾರದು. ನಾನು ತುಂಬಾ ಬಾಕಿ ಉಳಿಸಿಕೊಂಡಿದ್ದೇನೆ. ಸ್ವಲ್ಪ ಸ್ವಲ್ಪ ಕೊಡುತ್ತಾ ಕೊಡುವುದಕ್ಕೆ ಆರಂಭ ಮಾಡಿದ್ದೇನೆ. ಇನ್ನೂ ಕೊಡುವುದು ತುಂಬಾ ಇದೆ. ನನ್ನಿಂದ ಸಾಲವಾಗಿ ಅಲ್ಲದಿದ್ದರೂ ದಾನವಾಗಿ ತೆಗೆದುಕೊಳ್ಳುವುದಾದರೆ ಕೊಡುವುದಕ್ಕೆ ನಾನು ತಯಾರು. ನಾನು ನಿರ್ಧರಿಸಿದ್ದೇನೆ ಬಾಕಿ ಉಳಿಸಿಕೊಳ್ಳುವುದಿಲ್ಲ…!
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ