ಸ್ಟೇಟಸ್ ಕತೆಗಳು (ಭಾಗ ೪೭೩) - ಸರಿ ತಪ್ಪು
ಸರಿ ಮತ್ತು ತಪ್ಪುಗಳು ದಾರಿಯ ಮಧ್ಯದಲ್ಲಿ ಸಂಧಿಸಿದವು. ಅಲ್ಲಿ ನಡೆದ ಮಾತುಕತೆಯಲ್ಲಿ ಸರಿ ತನ್ನ ಹೆಸರನ್ನ ತಪ್ಪು ಅಂತಲೂ, ತಪ್ಪು ತನ್ನ ಹೆಸರನ್ನು ಸರಿ ಅಂತಲೂ ವಾದಿಸುವುದಕ್ಕೆ ಆರಂಭವಾಯಿತು. ವಾದ ಹೆಚ್ಚಾಗುತ್ತಾ ಹೋದ ಹಾಗೆ ಇಬ್ಬರ ಹೆಸರು ಸರಿಗಳಾದವು, ಇನ್ನೊಬ್ಬರನ್ನು ತಪ್ಪು ಅಂತಲೂ ವಾದಗಳು ಬೆಳೆಯುತ್ತಾ ಹೋದವು. ಅದಕ್ಕೆ ಒಂದಷ್ಟು ಕಾರಣಗಳನ್ನು ಕೊಡುತ್ತಾ ಬಂದರು, ಒಂದಷ್ಟು ಸನ್ನಿವೇಶಗಳನ್ನು ವಿವರಿಸಿದರು, ವ್ಯಕ್ತಿಗಳ ಹೆಸರನ್ನು ತಂದರೂ, ಕಾಲಮಾನವನ ತಿಳಿಸಿದರು, ಭೂತ ಮತ್ತು ವರ್ತಮಾನಗಳ ವಿಚಾರಗಳನ್ನು ವಿವರಿಸಿದರು, ಒಟ್ಟಿನಲ್ಲಿ ತಾವು ಸರಿಯಾಗಿರಬೇಕು ಅನ್ನೋದಷ್ಟೇ ಅವರ ವಾದ. ಇನ್ನೊಬ್ಬನ ಹೆಸರು ತಪ್ಪು ಅನ್ನೋದು ಅವರಿಬ್ಬರ ಕೊನೆಯ ತೀರ್ಮಾನ. ಇದರ ನಡುವೆ ಇವರ ವಾದವನ್ನು ಸರಿಪಡಿಸುವುದಕ್ಕೆ ಎಂದು ಬಂದವ ಇವರ ವಾದವನ್ನು ಕೇಳಿ ತೀರ್ಮಾನವನ್ನು ಕೊಡದೆ ತಲೆಮೇಲೆ ಕೈಹೊತ್ತು ಮುಂದೆ ನಡೆದುಬಿಟ್ಟ. ಆಗ ಸರಿ-ತಪ್ಪುಗಳು ಇಬ್ಬರು ಹೆಗಲ ಮೇಲೆ ಕೈ ಹಾಕಿಕೊಂಡು ನಾವಿಬ್ಬರು ಸರಿ ಬಂದು ಹೋದವನಲ್ಲ ಅವನೇ ತಪ್ಪು ನಾವಿಬ್ರು ಜೊತೆಯಾಗಿರೋಣ ಅಂತ ಹೇಳಿ ಅಲ್ಲಿಂದ ನಡೆದುಬಿಟ್ಟರು. ಸರಿ-ತಪ್ಪುಗಳು ಅವರವರ ಆಲೋಚನೆಗಳಿಗೆ ಬೇರೆಬೇರೆಯಾಗಿ ಬಿಟ್ಟಿರುತ್ತವೆ .ಅವನ ಸರಿ ಇವನಿಗೆ ತಪ್ಪಾಗಿರಬಹುದು, ಇವನ ತಪ್ಪು ಅವನಿಗೆ ಸರಿ ಎನ್ನಿಸಿರಬಹುದು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ