ಸ್ಟೇಟಸ್ ಕತೆಗಳು (ಭಾಗ ೪೮೦) - ಲೊಕೇಶನ್

ಸ್ಟೇಟಸ್ ಕತೆಗಳು (ಭಾಗ ೪೮೦) - ಲೊಕೇಶನ್

ನಮ್ಮ ಮನೆಯನ್ನು ಹುಡುಕಿಕೊಂಡು ಯಾರಾದರೂ ಬರಬೇಕೆಂದಿದ್ದರೆ ಒಂದಾದರೆ ಅವರ ಬಳಿ ನಮ್ಮ ಮನೆಯ ಲೊಕೇಶನ್ ಇರಬೇಕು ಅಥವಾ ನಮ್ಮ ಮನೆಯ ವಿಳಾಸ ಅವರಿಗೆ ಗೊತ್ತಿರಬೇಕು, ನಮ್ಮ ಊರಿನ ಪರಿಚಯ ಅವರಿಗೆ ಇರಬೇಕು ಅಥವಾ ನಮ್ಮ ಮನೆಯ ಪರಿಚಯ ಇರುವ ಯಾರಲ್ಲಾದರೂ ಕೇಳಿ ಇಲ್ಲಿಗೆ ಬರಬೇಕು ಅಥವಾ ದಾರಿತಪ್ಪಿ ಬರಬೇಕು ಇದಿಷ್ಟೇ ಕಾರಣಗಳಿಂದ ನಮ್ಮ ಮನೆಗೆ ಯಾರಾದರೂ ಬರಬಹುದು. ಹೀಗಿರುವಾಗ ಒಳಿತು ನಮ್ಮನ್ನು ಹುಡುಕಿಕೊಂಡು ಬರಬೇಕು ಅಂತಾದರೆ, ಭಗವಂತ ನಮ್ಮ ಮನೆಯಲ್ಲಿ ನೆಲೆ ನಿಲ್ಲಬೇಕು ಅಂದರೆ ಅವರಿಗೆ ಒಂದು ಲೋಕೇಶನ್ ನಾವು ಕಳಿಸಬೇಕು. ವಿಳಾಸವನ್ನ ತಿಳಿಸಬೇಕು ಹಾಗಿದ್ದಾಗ ಒಳಿತಿನ ಜೊತೆಗೆ ಭಗವಂತ ನಮ್ಮ ಮನೆಯಲ್ಲಿ ನೆಲೆಯಾಗುತ್ತಾನೆ. ನಮ್ಮ ಸಂದೇಶ ಭಗವಂತನ ಬಳಿಗೆ ತಲುಪಿ ಆತ ನಮ್ಮ ಮನೆಯನ್ನು ಹುಡುಕಿಕೊಂಡು ಬರುವುದಕ್ಕೆ ನಾವು ನಿಷ್ಕಲ್ಮಶ ಮನಸ್ಸಿನವರಾಗಿರಬೇಕು, ಪ್ರೀತಿಯನ್ನು ಹಂಚಬೇಕು, ಹಸಿವನ್ನ ನೀಗಿಸಬೇಕು, ಒಳಿತನ್ನೇ ಬಯಸುವವರಾಗಿರಬೇಕು ಹೀಗಿದ್ದಾಗ ನಮ್ಮ ಮನೆಯ ವಿಳಾಸ ಭಗವಂತನಿಗೆ ತಲುಪುತ್ತದೆ. ಆತ ಹುಡುಕಿಕೊಂಡು ಬರುತ್ತಾನೆ. ಒಳಿತೂ ಕೂಡ ಹಾಗೆ ನಾವು ಪ್ರಾಂಜಲ ಮನಸ್ಸಿನಿಂದ ಪ್ರತಿಯೊಂದು ಕೆಲಸವನ್ನು ಮಾಡಿದಾಗ ಒಳಿತು ಯಾರಲ್ಲಾದರೂ ವಿಳಾಸವನ್ನು ತಿಳಿದುಕೊಂಡು ನಮ್ಮ ಮನೆಗೆ ಬರುತ್ತದೆ. ಬಂದ ಮೇಲೆ ಅದನ್ನು ಉಳಿಸಿಕೊಳ್ಳುವುದು ನಮ್ಮದೇ ಕರ್ತವ್ಯ. ಹಾಗಾಗಿ ಲೊಕೇಶನ್ ಇನ್ನೂ ಭಗವಂತನಿಗೆ ಕಳಿಸಿಲ್ಲವಾದರೆ ಅವನಿಗೆ ತಲುಪಿಲ್ಲವಾದರೆ, ಯೋಚನೆಗಳು ಕಾರ್ಯಗಳನ್ನು ಚೂರು ಬದಲಿಸಿದರೆ ಭಗವಂತನ ಸಾನ್ನಿಧ್ಯ ಪ್ರಾಪ್ತವಾಗುತ್ತದೆ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ