ಸ್ಟೇಟಸ್ ಕತೆಗಳು (ಭಾಗ ೪೯೦) - ಬೆಳಕು

ಸ್ಟೇಟಸ್ ಕತೆಗಳು (ಭಾಗ ೪೯೦) - ಬೆಳಕು

ಮೊದಲಿನಿಂದಲೂ ಹಾಗೆ ಬದುಕಿದ ಕಾರಣ ಒಂದಷ್ಟು ಕಷ್ಟ ಅನಿಸಿರಬೇಕು. ಮನೆಯೊಳಗೆ ಕುಳಿತು ಕೆಲಸ ಮಾಡುತ್ತಿದ್ದೆ. ತಕ್ಷಣ ಕರೆಂಟ್ ಹೋಯಿತು. ಏನೂ ಕೆಲಸ ಮಾಡೋದಕ್ಕೆ ಆಗ್ತಾ ಇಲ್ಲ. ಪೂರ್ತಿ ಕತ್ತಲು. ಏನು ಮಾಡುವುದಕ್ಕೂ ತೋಚುತ್ತಿಲ್ಲ. ಹಚ್ಚಿದ ದೀಪದ ಬೆಳಕಿನಲ್ಲಿ ಏನೂ ಕಾಣುತ್ತಿಲ್ಲ. ಇರೋ ನಾಲ್ಕು ಕ್ಯಾಂಡಲ್ ಉರಿಸಿದೆ ಆದರೂ ಕೆಲಸ ಮಾಡೋದಕ್ಕೆ ಆಗ್ತಾ ಇಲ್ಲ. ಮನಸ್ಸು ಪೂರ್ತಿಯಾಗಿ ಕರೆಂಟಿನ ಬೆಳಕಿಗೆ ಒಗ್ಗಿ ಹೋಗಿಬಿಟ್ಟಿದೆ. ಯಾವುದು ಸರಿಯಾಗಿ ಕಾಣುತ್ತಿಲ್ಲ. ಕರೆಂಟ್ ಬರುವ ಯಾವ ಸೂಚನೆಯೂ ಕಾಣುತ್ತಿಲ್ಲ. ಕೆಲಸ ಮುಂದುವರಿದಿಲ್ಲ. ನಾಳೆ ಆಗಿರೋ ಕೆಲಸವನ್ನು ಕೇಳಿದರೆ ಏನು ಹೇಳೋದು? ಗೊತ್ತಾಗ್ತಾ ಇಲ್ಲ. ನಾನು ಕರೆಂಟಿನ ಬೆಳಕಿಗೆ ನನ್ನ ಕಣ್ಣನ್ನ ಹೊಂದಿಸಿದ್ದು  ತಪ್ಪಾ?  ಬದುಕನ್ನು ಕತ್ತಲಿನಿಂದ ಆರಂಭಿಸಬೇಕಿತ್ತು. ಕ್ಯಾಂಡಲ್ ಬೆಳಕು, ದೀಪದ ಬೆಳಕು ನಂತರ ಕರೆಂಟಿನ ಬೆಳಕಿನ ಕಡೆಗೆ ಸಾಗಬೇಕು. ಎಲ್ಲಾ ಬೆಳಕಿನಲ್ಲೂ ಕೆಲಸವನ್ನು ಮುಂದುವರಿಸುವ ಯೋಚನೆ ಮನಸ್ಸಿನಲ್ಲಿರಬೇಕು. ಹಾಗಾದಾಗ ಯಾವುದೇ ಸಂದರ್ಭ ಬಂದರೂ ನನಗೆ ಕೆಲಸ ಮುಂದುವರಿಸಬಹುದು.

ಯೋಚಿಸಿದ ಕಡೆಗೆ ಸಾಗಬೇಕೆಂದಾಗ ಬೆಳಕುಗಳು ಬದಲಾಗುತ್ತದೆ. ಆದರೆ ಕೆಲಸದ ವೇಗದಲ್ಲಿ ಒಂದು ಹೆಚ್ಚು ಕಡಿಮೆಯಾಗಬಹುದು, ಕೆಲಸ ನಿಲ್ಲಬಾರದು. ಮತ್ತೆ ಬೆಳಕು ಬಂದಾಗ ನನಗಿಂತ ತುಂಬಾ ಜನ ಮುಂದೆ ಸಾಗಿ ಬಿಟ್ಟಿರುತ್ತಾರೆ. ಹಾಗಾಗಿ ಯಾವುದೇ ಬೆಳಕಾದರು  ಕೆಲಸ ಮಾಡುವುದನ್ನು ಕಲಿಯಬೇಕು. ಜೀವನದಲ್ಲಿ ಪರಿಸ್ಥಿತಿಗಳು ಹಾಗೇ... ಬದುಕೋದು ಒಂದು ಕಲೆ.. ಬದುಕಿ ತೋರಿಸಬೇಕು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ