ಸ್ಟೇಟಸ್ ಕತೆಗಳು (ಭಾಗ ೪೯೨) - ಅನಿರೀಕ್ಷಿತ
ಅನಿರೀಕ್ಷಿತಗಳು ಘಟಿಸಿದಾಗ ಮಾತ್ರ ಬದುಕು ಅದ್ಭುತ ಅಂತ ಅನ್ನಿಸೋಕೆ ಆರಂಭವಾಗುತ್ತೆ. ಬಯಸಿದಂತೆ ಎಲ್ಲವೂ ನಡೀತಾ ಹೋಗ್ತಾ ಇದ್ರೆ ಅದರಲ್ಲೇನೂ ಹೊಸತಿರೋದಿಲ್ಲ. ಇನ್ನೇನಾದ್ರು ಹೊಸತು ಮಾಡಬೇಕು, ಹೊಸ ಸಾಧನೆ ಕಡೆ ಸಾಗಬೇಕು, ಅನ್ನುವ ತುಡಿತ ಮೂಡುವುದೇ ಇಲ್ಲ. ನಮಗರಿವಿಲ್ಲದಂತೆ ನಮ್ಮ ಬಗ್ಗೆ ಅಷ್ಟೇನು ಗೊತ್ತಿಲ್ಲದ ಮನಸ್ಸುಗಳ ನಡುವೆ ನಾವು ಗಟ್ಟಿಯಾಗಿ ನೆಲೆ ನಿಂತು ಅವರ ಬಳಗದೊಳಗೆ ನಾವು ಒಬ್ಬರಾಗಿ ವಿಶೇಷ ಗೌರವ ಸಿಗುವುದು ಇದೆಯಲ್ಲಾ ಅದು ನಮ್ಮನ್ನ ಇನ್ನೂ ಏನಾದರೂ ಹೊಸತು ಮಾಡಬೇಕು ಅಂತ ಪ್ರೇರಣೆ ನೀಡುತ್ತವೆ. ಈಗ ಮಾಡುತ್ತಿರುವುದು ಚೆನ್ನಾಗಿದೆ ಇದರ ಜೊತೆಗೆ ಇನ್ನೊಂದಷ್ಟು ಹೊಸ ಕ್ಷೇತ್ರಗಳಿಗೆ ಪರಿಚಯಿಸಿಕೊಳ್ಳುವ ಅವಶ್ಯಕತೆ ಇದೆ ಅನ್ನೋದನ್ನು ಕೂಡ ತಿಳಿಸುತ್ತೆ.
ಈ ಅನಿರೀಕ್ಷಿತಗಳು ಆಗಾಗ ಎದುರಾಗುತ್ತಾ ಇರಬೇಕು ಒಳ್ಳೆಯದೋ ಕೆಟ್ಟದ್ದೋ ಒಂದು ಸಲ ಮೈಗೊಂದು ರೋಮಾಂಚನವನ್ನು ಹುಟ್ಟಿಸಿ, ಬಂದ ದಾರಿಯನ್ನೊಮ್ಮೆ ನೋಡಿ ಒಂದಷ್ಟು ಸಾರ್ಥಕ ಭಾವವನ್ನು ಹೊಂದುವುದಕ್ಕೆ ಸಹಾಯ ಮಾಡುತ್ತದೆ. ಹಾಗಾಗಿ ಜೀವನಕ್ಕೆ ಅನಿರೀಕ್ಷಿತಗಳು ತುಂಬಾ ಅವಶ್ಯಕ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ