ಸ್ಟೇಟಸ್ ಕತೆಗಳು (ಭಾಗ ೪೯೫) - ಪಯಣ

ಸ್ಟೇಟಸ್ ಕತೆಗಳು (ಭಾಗ ೪೯೫) - ಪಯಣ

ತಲುಪಬೇಕಾದ ಜಾಗದ ಅರಿವಿದ್ದಾಗ ಮಾತ್ರ ಆ ಊರಿಗೆ ಹೊರಡುವ ಬಸ್ಸನ್ನ ಏರುತ್ತೇವೆ. ಅದನ್ನು ಬಿಟ್ಟು ಕೈಯಲ್ಲಿರುವ ದುಡ್ಡಿಗೆ, ಬಸ್ಸು ಹೋಗಿ ಎಲ್ಲಿ ನಿಲ್ಲುತ್ತೋ ಅಲ್ಲಿ ನಿಲ್ಲಿಸಿ, ಮುಂದೆ ಇಳಿದುಕೊಂಡು ಇನ್ಯಾವುದೋ ಕಡೆಗೆ ಹೊರಡುತ್ತೇವೆ ಅಂದರೆ ಯಾರಾದರೂ ಕೇಳುತ್ತಾರಾ. ಉತ್ತರಕ್ಕೆ ಹೋಗಲು ದಕ್ಷಿಣದ ಬಸ್ಸನ್ನೇರಿದರೆ ಏನು ಫಲ. ಇದು ಸ್ಥಿರವಲ್ಲದ ಪಯಣ ಹಾಗಾಗಿ ನಮ್ಮ ಜೀವನ ಪಯಣದಲ್ಲಿ ನಾವೆಲ್ಲಿ ಇಳಿಯಬೇಕು, ಎಲ್ಲಿಗೆ ತಲುಪಬೇಕು, ನಮ್ಮಲ್ಲಿ ಟಿಕೇಟ್ ಗೆ ಇರುವ ಹಣವೆಷ್ಟು ಅನ್ನುವುದರ ಅರಿವೂ ಇರಬೇಕು. ಇಲ್ಲವಾದರೆ ಪಯಣವು ವ್ಯರ್ಥ ಕಾಲಹರಣವನ್ನ ಮಾಡಿ ನಾವು ತಲುಪಬೇಕಾದ ಗುರಿಯು ನಮಗೆ ಸಿಗದಂತೆ ಆಗಿಬಿಡುತ್ತದೆ. ನಮ್ಮ ಗುರಿಯು ಇನ್ಯಾರದೋ ಪಾಲಾಗುತ್ತದೆ. ಬಸ್ಸನೇರುವ ಮುನ್ನ ಊರು ಮತ್ತು ಬಸ್ಸು ಚಲಿಸುವ ಜಾಗ, ನಾವು ತಲುಪಬೇಕಾದ ನಿಲ್ದಾಣಗಳ ಬಗ್ಗೆ  ಅರಿವಿದ್ದರೆ ಪಯಣಕ್ಕೊಂದು ಅರ್ಥ ಅಲ್ವಾ…

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ