ಸ್ಟೇಟಸ್ ಕತೆಗಳು (ಭಾಗ ೪೯೬) - ಗೆಲುವು

ಸ್ಟೇಟಸ್ ಕತೆಗಳು (ಭಾಗ ೪೯೬) - ಗೆಲುವು

ಮನಸ್ಸಲ್ಲಿ ಒಂದಿಷ್ಟು ಪೂರ್ವನಿರ್ಧಾರಿತ ಯೋಜನೆಗಳನ್ನು ತುಂಬಿಸಿಕೊಂಡು ಬಿಟ್ಟಾಗ ನೈಜವಾಗಿ ಮಾತನಾಡುವುದಕ್ಕೆ ಆಗೋದಿಲ್ಲ .ಅವರಿಗೆ ಹೊಸತೇನಾದರೂ ನೀಡಬೇಕು, ಎಲ್ಲರ ಮುಂದೆ ಅವರು ಗೆದ್ದು ತೋರಿಸಬೇಕು ಎನ್ನುವ ಯೋಚನೆಗಳು ಮನಸ್ಸಿನೊಳಗಿದ್ದಾಗ ಅವರು ಮಾಡುವ ಯಾವ ತಪ್ಪುಗಳು ಕಾಣುವುದಿಲ್ಲ. ಇವರಲ್ಲಿ ಯಾರ ಗುರುತು ಪರಿಚಯವೂ ನಮಗಿಲ್ಲ,ಅವರಿಂದ ಮುಂದೆ ನಮಗೇನೂ ಆಗಬೇಕಾಗಿಲ್ಲ ಎಂದಾಗ  ಸಣ್ಣ ಸಣ್ಣ ವಿಚಾರಗಳನ್ನು ಒತ್ತಿ ಒತ್ತಿ ಹೇಳುವ ರೀತಿ ಹೆಚ್ಚಾಗಿರುತ್ತದೆ. ಅವರು ಆತ್ಮೀಯರಾಗಿದ್ದು ನಮ್ಮಂತೆಯೇ ಅವರಿಂದ ಮುಂದೆ ನನಗೊಂದಷ್ಟು ಕೆಲಸಗಳು ಆಗಬೇಕು ಅಂಥಾದಾಗ ಅವರ ಯಾವ ತಪ್ಪುಗಳನ್ನು ಹೇಳುವುದಕ್ಕೆ ಹೋಗುವುದಿಲ್ಲ. ಅವರು ಮಾಡಿದ್ದೆಲ್ಲವೂ ಸರಿ .ಎಲ್ಲವೂ ಅದ್ಭುತ .ಹೀಗಾದಾಗ ನೈಜತೆಗಳು ಹೊರಬರುವುದು ಯಾವಾಗ? ನಿಜ ಪ್ರತಿಭೆಗಳು ಬೆಳಕಿನಲ್ಲಿ ಮಿನುಗುವುದು ಯಾವಾಗ? ಅರ್ಹತೆಗೆ ಗೆಲುವು ಸಿಗಬೇಕು ಅಲ್ವಾ ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ