ಸ್ಟೇಟಸ್ ಕತೆಗಳು (ಭಾಗ ೪೯೭) - ಪರದೆ
ಪರದೆ ಹಿಂದಿನ ಬದುಕು ಎಲ್ಲರಿಗೂ ಕಾಣುವುದಿಲ್ಲ. ಆ ಪರದೆಯ ಹಿಂದೆ ನಿಂತಿರುವವನ ಮೇಲೆ ಬೆಳಕು ಕೂಡ ಬೀರೋದಿಲ್ಲ. ಆತ ಕತ್ತಲೆಯಲ್ಲಿ ನಿಂತು ಕೆಲಸವನ್ನು ಮುಂದುವರಿಸುತ್ತಾ ಇರುತ್ತಾನೆ. ಅವನಿಗೆ ಬೆಳಕಿಗೆ ಬರುವ ಯಾವ ಆಸೆಯೂ ಇರೋದಿಲ್ಲ ಬೆಳಕಲ್ಲಿರುವವರು ಇನ್ನೂ ಹೆಚ್ಚು ಪ್ರಸಿದ್ದಿಗೆ ಬರಬೇಕು, ಅವರ ಪ್ರತಿಭೆಗೆ ಇನ್ನಷ್ಟು ದೊಡ್ಡ ವೇದಿಕೆಗಳು ಸಿಗಬೇಕು ಅಂತ ಬಯಸುವುದು ಮಾತ್ರ ಪರದೆಯ ಹಿಂದಿರುವವನ ಕೆಲಸ. ಆತ ಪರದೇ ಹಿಂದೆ ಬೆವರು ಹರಿಸಿ ಶ್ರಮಪಟ್ಟು ಮಾಡಿದ ಕೆಲಸದಿಂದ ಪರದೆಯ ಮುಂದೆ ಬೆಳಕಿನಲ್ಲಿ ನರ್ತಿಸುವವನಿಗೆ, ನಿಂತವನಿಗೆ, ಮಾತನಾಡುವವನಿಗೆ, ಆಡುವವನಿಗೆ ಮೌಲ್ಯ ಹೆಚ್ಚುತ್ತಾ ಹೋಗುತ್ತದೆ. ಬೆಳಕಿನಲ್ಲಿ ನಿಂತವನು ಗೌರವಿಸಬೇಕಾದು ಪರದೆ ಹಿಂದಿರುವವನನ್ನ. ಬದುಕಿನಲ್ಲೂ ಪರದೆ ಹಿಡಿದು ನಮ್ಮ ಜೀವನ ಪ್ರದರ್ಶನಕ್ಕೆ ಒಂದಷ್ಟು ಜನ ಬೆಂಗಾವಲಾಗಿ ನಿಂತಿರುತ್ತಾರೆ. ಅವರ ಬಗೆಗೆ ಸಣ್ಣ ಆಲೋಚನೆ ಇರಲೇಬೇಕು. ಅವರಿಂದ ನಾವು ಬೆಳಗುವುದಕ್ಕೆ ಸಾಧ್ಯವಾಗಿದ್ದು ಅನ್ನುವುದರ ಅರಿವಿರಬೇಕು. ಬೆಳಕಿನ ಮುಂದೆ ನಡೆಯುವಾಗ ಒಮ್ಮೆ ಬದುಕಿನ ಪರದೆಯ ಹಿಂದಿರುವವರನ್ನು ಗಮನಿಸಿದರೆ ಬದುಕಿಗೊಂದು ಅರ್ಥ ಸಿಕ್ಕಿತು
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ