ಸ್ಟೇಟಸ್ ಕತೆಗಳು (ಭಾಗ ೪೯೮) - ಶಾಮಿಯಾನ
ಮೈದಾನದ ಮಧ್ಯದಲ್ಲಿ ಬಿಸಿಲಿನ ಶಾಖಕ್ಕೆ ಒಣಗುತ್ತಿರುವ ಶಾಮಿಯಾನದ ಜೀವನ ಹೇಗಿರಬಹುದು? ಆ ಶಾಮಿಯಾನಕ್ಕೆ ತಾನು ಯಾರಿಗೆ ನೆರಳನ್ನು ನೀಡ್ತಾ ಇದ್ದೇನೆ ಅನ್ನುವುದರ ಯೋಚನೆ ಇಲ್ಲ. ತನ್ನ ಯಜಮಾನ ತನ್ನನ್ನ ಎಲ್ಲಿ ನೆರಳು ನೀಡಬೇಕು ಅಂತ ನಿಲ್ಲಿಸಿ ಹೋಗಿರುತ್ತಾನೋ ಅಲ್ಲಿಗೆ ನೆರಳು ನೀಡುವುದಷ್ಟೇ ಕೆಲಸ. ಬಿಸಿಲೆಷ್ಟೇ ಪ್ರಕಾರವಾದರೂ ತಡೆಯನ್ನು ಒಡ್ಡಿ ನೆರಳನ್ನು ನೀಡುತ್ತದೆ. ತನ್ನ ಕೆಳಗೆ ಕುಳಿತವರು ಸುಖವನ್ನೋ, ದುಃಖವನ್ನೋ, ಮೋಸವನ್ನೋ, ಅಸೂಯೆಯನ್ನೋ, ಹೀಗೆ ವಿಭಿನ್ನವಾದ ಭಾವಗಳನ್ನ ಪ್ರದರ್ಶಿಸಿ ಮಾತನಾಡಿದಾಗಲೂ ಇದು ಯಾವುದಕ್ಕೂ ಪ್ರತಿಕ್ರಿಯೆಯನ್ನು ನೀಡದೆ ಸುಮ್ಮನೆ ನಿಂತುಬಿಟ್ಟಿದೆ. ಕೆಲವೊಂದು ಕಡೆ ಆ ಶಾಮಿಯಾನಕ್ಕೆ ಇವರಾಡುತ್ತಿರುವುದು ಸುಳ್ಳು ಅನ್ನುವುದರ ಅರಿವಿದೆ, ಹಿಂದಿನ ಸಲ ಬೈದವನು ಈಗ ಹೊಗಳುತ್ತಾ ಇದ್ದಾನೆ ಅನ್ನುವ ವಿಚಾರವೂ ಗೊತ್ತಿದೆ, ಆದರೆ ಎಲ್ಲಿಯೂ ಕೂಡ ಶಾಮಿಯಾನ ಆ ಮಾತನ್ನು ಯಾರ ಬಳಿಯೂ ಬಾಯಿ ಬಿಟ್ಟಿಲ್ಲ. ಯಾಕೆಂದರೆ ಈ ಮನುಷ್ಯ ಅನ್ನುವವನು ಕ್ಷಣಕೊಂದು ಭಾವದಿಂದ ಬದುಕ್ತಾ ಹೋಗ್ತಾನೆ. ಅವನ ದಾರಿ ಅವನು ನೋಡ್ಕೋತಾನೆ ತಾನು ಅವರ ದಾರಿಯನ್ನು ಸರಿಪಡಿಸುವುದಕ್ಕೆ ಹೋಗಿ ತನ್ನ ಜೀವನವನ್ನು ಕಳೆದುಕೊಳ್ಳುವುದು ಹಾಗಾಗಿ ಕೆಲವೇ ಗಂಟೆಗಳಲ್ಲಜ ಊರು ಬಸಲಿಸಿ ಇನ್ನೊಂದು ಕೆಲಸಕ್ಕೆ ಹೊರಡಲು ಮಾನಸಿಕವಾಗಿ ತಯಾರಾಯಿತು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ