ಸ್ಟೇಟಸ್ ಕತೆಗಳು (ಭಾಗ ೫೦೦) - ತುಲನೆ

ಸ್ಟೇಟಸ್ ಕತೆಗಳು (ಭಾಗ ೫೦೦) - ತುಲನೆ

ನಾವು ಪ್ರತಿ ದಿನ ಆಟ ಆಡುವ ಶಾಲೆ ಮೈದಾನ ಒಂದೇ, ಅವರ ಶಾಲೆ ಕಟ್ಟಡದ ಮೇಲೊಂದು ಕಟ್ಟಡ ಅದರ ಮೇಲೊಂದು ಕಟ್ಟಡ ಕಟ್ಟಿಬಿಟ್ಟಿದ್ದಾರೆ. ನಮ್ಮದು ಒಂದೇ ಸಣ್ಣ ಕಟ್ಟಡ ಅದು ಹಂಚು ಹಾಕಿದ್ದು ಮಳೆಯ ನೀರು ಕ್ಲಾಸಿನ ಒಳಗೆ ಬೀಳ್ತಾ ಇರುತ್ತದೆ. ಅವರ ಕಾಲಿಗೊಂದು ಶೂ ಇರುತ್ತದೆ, ಅವರ ಬಟ್ಟೆ ಬಣ್ಣ ಬಣ್ಣದ್ದು. ಜೊತೆಗೆ ಅವರ ಶಾಲೆಯ ಮುಂದೆ ಅವರನ್ನು ಇಳಿಸಿ ಹೋಗುವ ಗಾಡಿಗಳಿದ್ದಾವೆ, ಮನೆಯವರೆಗೂ ತಲುಪಿಸುವ ಗಾಡಿಗಳಿದ್ದಾವೆ. ಅವರಿಗೆ ಆಟ ಹೇಳಿ ಕೊಡುವುದಕ್ಕೆ ಒಬ್ಬರು ಮೇಷ್ಟ್ರು ಇದ್ದಾರೆ. ಒಂದೊಂದು ಪಾಠಕ್ಕೂ ಒಬ್ಬರು. ಅವರು ಶಾಲೆಯಲ್ಲಿ ಆಗುವ ಕಾರ್ಯಕ್ರಮಕ್ಕೆ ಎಷ್ಟು ಖರ್ಚು ಮಾಡ್ತಾರೆ, ತುಂಬಾ ಜನ ಸೇರ್ತಾರೆ, ಅವರ ಬಟ್ಟೆ ಎಷ್ಟು ಚಂದ ಅಲ್ವಾ? ನಮ್ಮನ್ನ ಕರೆದುಕೊಂಡು ಹೋಗುವುದಕ್ಕೆ ತಲುಪಿಸೋದಕ್ಕೆ ಯಾವ ಗಾಡಿಯೂ ಇಲ್ಲ. ಪಾಠವನ್ನು ಮಾಡುತ್ತಾರೆ, ಆದರೆ ಖುಷಿ ಅಂತ ಗೊತ್ತಾ ನಮಗೆ ಮಧ್ಯಾಹ್ನ ನಮ್ಮ ಶಾಲೆಯಲ್ಲಿ ಊಟ ಇದೆ. ನಮ್ಮ ಶಾಲೆಯಲ್ಲಿ ನಾವೇನು ಮಾಡಿದ್ರೂ ಮಾಸ್ಟರ್ ಬೈಯೋದಿಲ್ಲ, ಅವರ ಶಾಲೆಯಲ್ಲಿ ಹಾಗೆ ಮಾಡಬೇಡ ಈಗ ಮಾಡಬೇಡ ಅಂತ ಹೇಳುವುದಕ್ಕೆ ಜನ ಇದ್ದಾರೆ ನಾವು ನಮ್ಮ ಶಾಲೆಯಲ್ಲಿ ಕಲಿತರೆ ಜಗತ್ತಿನ ಎಲ್ಲಿ ಬೇಕಾದರೂ ಬದುಕುವಷ್ಟು ಧೈರ್ಯ ಇಲ್ಲಿ ಸಿಕ್ತದೆ ಅಂತೆ. ಹಾಗಂತ ತುಂಬಾ ಜನ ಭಾಷಣ ಮಾಡಿ ಹೋಗ್ತಾರೆ. ನಮಗೂ ಆಸೆ ಎಲ್ಲಾ ಶಾಲೆಗಳನ್ನು ಸೇರಿಸಿ ಒಂದೇ ಶಾಲೆ ಮಾಡಿ. ಎಲ್ಲರೂ ಹೀಗೆ ಇರಬೇಕು ಅಂತ ನಿಯಮ ಮಾಡಿ. ಆಗ ನಮ್ಮ ಆಸೆಗಳು ನೆರವೇರುತ್ತವೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ