ಸ್ಟೇಟಸ್ ಕತೆಗಳು (ಭಾಗ ೫೦೬) - ಅನಿವಾರ್ಯ
ಘಟಿಸಿದ್ದು ಒಂದು ಸಣ್ಣ ಘಟನೆ ಆದರೆ ಆ ಮನೆಗೆ ಅದೇ ತುಂಬ ದೊಡ್ಡ ಆಘಾತ. ಮನೆಯಲ್ಲಿರುವ ಎರಡು ಮಕ್ಕಳು ಅದರಲ್ಲಿ ಸಣ್ಣವನು ಮನೆಯ ಕೃಷಿ ಕೆಲಸವನ್ನು ನೋಡಿಕೊಂಡು ಮುಂದುವರಿಯುತ್ತಿದ್ದ ದೊಡ್ಡವನಿಗೆ ನಾಟಕ ಓದು ಅಂದರೆ ಇಷ್ಟ ಅವರವರ ದಾರಿಗಳು ಅವರವರ ಇಷ್ಟದ ಅನುಸಾರ ನಡೆಯುತ್ತಿದ್ದವು ಆ ದಿನ ಏನಾಯಿತು ಗೊತ್ತಿಲ್ಲ ಮನೆಯ ಸಣ್ಣವನಿಗೆ ಬದುಕು ಬೇಡ ಅನ್ನಿಸಿ ಆತ್ಮಹತ್ಯೆಯ ದಾರಿಯನ್ನ ತುಳಿದುಬಿಟ್ಟಿದ್ದ ಓದು ಮತ್ತು ನಾಟಕದ ಅಭ್ಯಾಸದಲ್ಲಿದ್ದ ಮನೆ ದೊಡ್ಡ ಹುಡುಗ ಅದನ್ನ ಅರ್ಧಕ್ಕೆ ನಿಲ್ಲಿಸಿ ಮನೆಯ ಕೃಷಿ ಕೆಲಸಕ್ಕೆ ಕೈ ಹಚ್ಚಿದ ಅಪ್ಪನ ಕುಡಿತ ಸ್ವಲ್ಪ ತುಸು ಹೆಚ್ಚಾಗಿ ಉಸಿರು ನಿಂತು ಹೋಯ್ತು. ಮನೆ ಆಧಾರ ಸ್ಥಂಭ ಇಬ್ಬರ ಹೆಗಲ ಮೇಲೆ ನಿಂತು ತಾಯಿ ಮತ್ತು ಮಗ ರಾತ್ರಿ ಹಗಲೆನ್ನದೆ ದುಡಿದು ಸಾಲ ತೀರಿಸಲಾರಂಬಿಸಿದರು. ಸಣ್ಣ ಅವಘಡ, ಅನಿರೀಕ್ಷಿತ ಘಟನೆಗಳು ಬದುಕಿನ ದಾರಿಯನ್ನೇ ಬದಲಾಯಿಸುತ್ತದೆ. ಇಷ್ಟವಿಲ್ಲದರೂ ಬದುಕಬೇಕಾದಂತಹ ಅನಿವಾರ್ಯ ಸ್ಥಿತಿಗೆ ಬಂದು ತಲುಪಿಸಿ ಬಿಡುತ್ತದೆ. ಕನಸುಗಳೆಲ್ಲ ಬದಿಗೆ ಸರಿದು ಜವಾಬ್ದಾರಿಗಳೇ ಬದುಕು ಕಟ್ಟಲಾರಂಬಿಸುತ್ತದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ