ಸ್ಟೇಟಸ್ ಕತೆಗಳು (ಭಾಗ ೫೧೨) - ಮೇಳ
ಅಲ್ಲಿ ಜನ ಸೇರಲಾಗಿದೆ. ಊರಿಗಿಂತ ಹೆಚ್ಚಿನ ಜನ ಅಲ್ಲಿಗೆ ಬಂದಿದ್ದಾರೆ. ಎಲ್ಲೆಲ್ಲೂ ಸಂಭ್ರಮ ಆದರೆ ಆ ಊರಲ್ಲಿನ ಜನಸಂಖ್ಯೆಯೇ ಅಷ್ಟಿಲ್ಲ. ಕೃಷಿ ಮೇಳದಲ್ಲಿ ಜನ ತುಂಬಿದ್ದಾರೆ ಅಥವಾ ತುಂಬಿಸಿದ್ದಾರೆ ಭಾಷಣ ಮಾಡುವವನ ಮನೆಯಲ್ಲಿ ಗದ್ದೆ ಇಲ್ಲ ಒಂದು ಹೊಲವಿಲ್ಲ, ಇಲ್ಲಿಜನರಿಗೆ ಸಂದೇಶ ಕೊಡೋದ್ದಕ್ಕೆ ದೂರದೂರದ ಜನ ಬಂದಿದ್ದಾರೆ, ಮಾತಲ್ಲಿ ಪ್ರಚಂಡರು, ನೆಲದ ಸತ್ವ ಗೊತ್ತಿಲ್ಲ. ಕೃಷಿ ಮಾಡುವವರು ಮೇಳದಲ್ಲಿ ಕಾಣ್ತಾನೆ ಇಲ್ಲ.
ಆಯೋಜನೆಗೆ ಕಾರಣವೇನು ದುಡ್ಡು ಮಾಡೋದೇ ಆ ಕಾರ್ಯಕ್ರಮದ ಉದ್ಧೇಶವೇ? ಒಂದಷ್ಟು ಗದ್ದೆಯಲ್ಲಿ ನೇಜಿನೆಟ್ಟು ಮಣ್ಣೊಳಗೆ ಬದುಕುವವರು ಆಯೋಜಿಸಬೇಕಾದ ಕಾರ್ಯಕ್ರಮ ಅವರ ಸಹಾಯಕ್ಕೆ ಬೇಕಾದ ಕಾರ್ಯಕ್ರಮ ಒಂದಷ್ಟು ದುಡ್ಡನ್ನು ಪೋಲು ಮಾಡಿ ವ್ಯರ್ಥ ಮಾಡೋದ್ಸಕ್ಕೆ ಬಳಕೆಯಾದದ್ದು ವಿಪರ್ಯಾಸ !
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ