ಸ್ಟೇಟಸ್ ಕತೆಗಳು (ಭಾಗ ೫೨೨) - ಕಾಯಬೇಕು
ಮನಸಲ್ಲಿ ಓಡುತ್ತಿದ್ದ ಪ್ರಶ್ನೆಗೆ ಉತ್ತರ ಬೇಕಿತ್ತು, ಅದಕ್ಕೆ ಹೇಳೋದು ಯಾರ ಹತ್ತಿರ ಅಂಥ ಗೊತ್ತಿರಲಿಲ್ಲ. ಆದರೂ ಫೋನಾಯಿಸಿದಾಗ ಅತ್ತ ಕಡೆಯಿಂದ ಸದಾಶಿವರು "ಏನು ವಿಷಯ? ತುಂಬಾ ಸಮಯದ ನಂತರ ಕರೆ ಮಾಡಿದ ವಿಚಾರವೇನು?"
ಸರ್, ನಮ್ಮ ವರ್ತಮಾನದ ಪ್ರಶ್ನೆಗಳಿಗೆ ಉತ್ತರ ಯಾವಾಗ ಸಿಗ್ತದೆ? ನೋಡು, ಪ್ರತಿಯೊಂದು ಪ್ರಶ್ನೆಗೂ ಉತ್ತರವಿರುತ್ತದೆ. ಆದರೆ ಎಲ್ಲವಕ್ಕೂ ಎಲ್ಲಾ ಸಮಯದಲ್ಲೂ ಉತ್ತರ ಸಿಗಬೇಕು ಅಂತಾನೂ ಇಲ್ಲ. ಕೆಲವೊಂದು ವರ್ತಮಾನದ ಪ್ರಶ್ನೆಗಳಿಗೆ ಭವಿಷ್ಯದಲ್ಲಿ ಉತ್ತರ ನಿಖರವಾಗಿ ಸಿಗುತ್ತದೆ. ನಾವು ಕೇಳಿರುವ ಪ್ರಶ್ನೆ ಬರಿಯ ಪ್ರಶ್ನೆಯಾಗಿ ಮರೆತು ಹೋಗಿರುತ್ತದೆ ಯಾವತ್ತೂ ಭವಿಷ್ಯದಲ್ಲಿ ಅದಕ್ಕೊಂದು ಉತ್ತರ ದೊರಕಿದಾಗ ನಾವು ಕೇಳಿದ ಪ್ರಶ್ನೆ ಮನಸ್ಸಿನೊಳಗೆ ಗಟ್ಟಿಯಾಗಿ ನಿಂತಿರುತ್ತದೆ. ಪ್ರಶ್ನೆ ಅಂತಲ್ಲ ಇಡುವ ಹೆಜ್ಜೆ ಕೂಡ ಹಾಗೆ ನಾವಿಂದು ಇಟ್ಟ ಹೆಜ್ಜೆ ಅದರ ದೀರ್ಘ ಬಾಳಿಕೆಯ ಬಗ್ಗೆ ನಮಗೂ ಗಮನ ಇರೋದಿಲ್ಲ ಆದರೆ ಭವಿಷ್ಯದಲ್ಲಿ ಘಟನೆಯೊಂದು ಘಟಿಸಿದಾಗ ನಾವಿಟ್ಟ ಹೆಜ್ಜೆಯ ಮಹತ್ವ ಅರಿವಾಗುತ್ತದೆ. ಅದರ ಶ್ರೇಷ್ಠತೆ ಕೂಡ ನಮಗೆ ತಿಳಿಯುತ್ತದೆ. ಪ್ರಶ್ನೆಗೆ ಉತ್ತರ ಸಿಗಲಿಲ್ಲ ಅಂದುಕೊಂಡು ಆ ಪ್ರಶ್ನೆಯಿಂದ ಹಿಂದೆ ಜರದು ಹೊಸ ಪ್ರಶ್ನೆಯನ್ನು ಹುಡುಕುವ ಬದಲು ಇದ್ದ ಪ್ರಶ್ನೆಯಲ್ಲಿ ಉತ್ತರ ಹುಡುಕುವ ಪ್ರಯತ್ನವನ್ನು ಮುಂದುವರಿಸುತ್ತಾ ಹೋಗಬೇಕು ಖಂಡಿತವಾಗಿಯೂ ಜೀವನದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೆಲವೊಂದಕ್ಕೆ ವ್ಯಕ್ತಿಗಳಿಂದ ಕಾಲದಿಂದ ಪ್ರಕೃತಿಯಿಂದ ಹೀಗೆ ಉತ್ತರಗಳು ದೊರಕುತ್ತಿರುತ್ತವೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ