ಸ್ಟೇಟಸ್ ಕತೆಗಳು (ಭಾಗ ೫೨೩) - ಎಷ್ಟು ಸರಿ?

ಸ್ಟೇಟಸ್ ಕತೆಗಳು (ಭಾಗ ೫೨೩) - ಎಷ್ಟು ಸರಿ?

ಮನೆ ನಾಲಕ್ಕು ಅಂತಸ್ತಿದ್ದು. ಅದರ ಒಳಗೆ ಬಳಸುವ ಹಾಸುಗಲ್ಲುಗಳು ದೂರ ದೂರಿನಿಂದ ತರಿಸಿದ್ದು. ಮಾರ್ಬಲ್ಗಳು ವಿದೇಶದ್ದು, ಬಣ್ಣ ಪಕ್ಕದ ರಾಜ್ಯದ್ದು, ಅಲಂಕಾರಿಕ ವಸ್ತುಗಳು ದೇಶದ ಬೇರೆ ಬೇರೆ ಭಾಗಗಳದ್ದು. ಚಿತ್ರಗಾರನಂತೂ ಜಗತ್ಪ್ರಸಿದ್ಧ. ಇಂಥವರೆಲ್ಲರ ಒಟ್ಟು ಸೇರುವಿಕೆಯಲ್ಲಿ ಒಂದು ಅದ್ಭುತ ಮನೆ ನಿರ್ಮಾಣವಾಗಿದೆ. ಆ ಮನೆಯನ್ನು ನೋಡಿದವರೆಲ್ಲರೂ ಕಣ್ಣು ಬಾಯಿ ಬಿಟ್ಟು ಅದರ ಸೌಂದರ್ಯವನ್ನು ಆಸ್ವಾದಿಸುತ್ತಿದ್ದಾರೆ. ಅವರ ಮನೆಯಲ್ಲಿ ಬದುಕುವುದು ಎರಡು ಜನ ಮಾತ್ರ. ಅಜ್ಜ ಮತ್ತು ಅಜ್ಜಿ. ಉಳಿದವರು ದೂರದ ಊರುಗಳಲ್ಲಿ ದೊಡ್ಡ ದೊಡ್ಡ ಕೆಲಸಗಳಲ್ಲಿ ತೊಡಗಿಸಿಕೊಂಡು ಬಿಟ್ಟಿದ್ದಾರೆ. ಈ ಮನೆಯ ಅಜ್ಜ ಅಜ್ಜಿ ಯಾವತ್ತೂ ಕೂಡ ದೊಡ್ಡದೊಂದು ಮನೆ ಬೇಕು ಅಂತ ಬಯಸಿದ್ದಿಲ್ಲ. ಎಲ್ಲರೂ ಜೊತೆಗಿರಬೇಕು ಅನ್ನೋದಷ್ಟೇ ಅವರ ಆಸೆ. ತಾವೇನು ಅನ್ನೋದನ್ನ  ತೋರಿಸುವ ಚಟ ಅದಕ್ಕಾಗಿ ಮನೆಯನ್ನು ಕಟ್ಟಿಬಿಟ್ಟಿದ್ದಾರೆ ಮನೆ ಮಕ್ಕಳು. ಮನೆಯನ್ನ ಕಟ್ಟಿ ಮನಸ್ಸಿನಿಂದ ದೂರ ಹೋಗಿ ಬದುಕುವುದರಲ್ಲಿ ಅರ್ಥ ಏನಿದೆ. ಕಷ್ಟ ಸುಖದಲ್ಲಿ ಅವರ ಕೈ ಹಿಡಿದು ನಿಲ್ಲಬೇಕು. ಕಷ್ಟ ಕಷ್ಟಸುಖಕ್ಕೆ ಸ್ಪಂದಿಸಬೇಕು. ಜೊತೆಗೆ ನಿಂತು ಆಧರಿಸಬೇಕು. ಅದು ಬಿಟ್ಟು ದೂರದೂರಿನಲ್ಲಿ ದೊಡ್ಡ ಕೆಲಸದಲ್ಲಿದ್ದೇನೆ ಎಂದು ಮನೆಯ ಮನಸ್ಸುಗಳನ್ನ ಮೂಲೆಗುಂಪು ಮಾಡುವುದು ಎಷ್ಟು ಸರಿ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ