ಸ್ಟೇಟಸ್ ಕತೆಗಳು (ಭಾಗ ೫೨೫) - ಚಟ್ಟ

ಸ್ಟೇಟಸ್ ಕತೆಗಳು (ಭಾಗ ೫೨೫) - ಚಟ್ಟ

ಸಂಜೆ ಹೊತ್ತು ಸೂರ್ಯ ಮುಳುಗಿ ಚಂದ್ರ ಹುಟ್ಟುತ್ತಾ ಇದ್ದ. ಅಲ್ಲಿ ಸ್ಮಶಾನದ ಬದಿಯಲ್ಲಿ ಒಟ್ಟಾಗಿ ಬಿದ್ದಿದ್ದ ಚಟ್ಟಗಳೆಲ್ಲ ಮಾತನಾಡುವುದಕ್ಕೆ ಆರಂಭ ಮಾಡಿದ್ವು. ಪ್ರತಿಯೊಂದು ಚಟ್ಟಗಳು ಬಂದ ಜಾಗಗಳು ಬೇರೆ ಆದರೆ ಬಂದು ಸೇರಿರುವ ಜಾಗ ಒಂದೇ. ಅವರ ಮೇಲೆ ಮಲಗಿದ್ದವರು ಆಯಸ್ಸನ್ನ ಎಲ್ಲ ಮುಗಿಸಿ ಹೊರಟವರು ಹಲವರು, ಅರ್ಧದಲ್ಲಿ ನಿಲ್ಲಿಸಿ ಬಂದವರು ಕೆಲವರು. ಇವೆಲ್ಲ ಅನುಭವ ಹೊಂದಿದ್ದ ಚಟ್ಟಗಳು ಮಾತನಾಡುವುದಕ್ಕೆ ಪ್ರಾರಂಭ ಮಾಡಿದವು. ನನ್ನ ಮೇಲೆ ಮಲಗಿದ್ದವನ ಹೊತ್ತುಕೊಂಡು ಬಂದು ನಾಲ್ಕು ಜನರಿಗೆ, ಮೇಲೆ ಮಲಗಿದವನ ಪರಿಚಯ ಇರಲಿಲ್ಲ. ಅದೊಂದು ಜವಾಬ್ದಾರಿ ಅನ್ನೋ ಕಾರಣಕ್ಕೆ ಬಂದಿದ್ದರು. ಇನ್ನೊಬ್ಬ ಹಿಂದಿನ ಯಾವುದೋ ಘಟನೆಗಳನ್ನ ಮೇಲೆ ಮಲಗಿದವ ಮಾಡಿದ ತಪ್ಪುಗಳ ಪಟ್ಟಿಗಳನ್ನೇ ಹೇಳಿಕೊಂಡು ಇಲ್ಲಿಯವರೆಗೆ ತಲುಪಿದರು. ನನ್ನ ಜೊತೆ ಬಂದವರು ಒಂದಷ್ಟು ಗುಣಗಾನ ಅವನನ್ನ ಕಳೆದುಕೊಂಡು ಆಗಿರುವಂತಹ ನೋವು ಅವನ ಜೀವನದಲ್ಲಿ ಅವನು ಅನುಭವಿಸಿದ ಕಷ್ಟ ಇವೆಲ್ಲವನ್ನ ಹೇಳುತ್ತಾ ಬಂದರು. ಮೌನವಾಗಿ ಅಲ್ಲಿಂದ ಇಲ್ಲಿವರೆಗೂ ತಲುಪಿದವರು ಯಾರೂ ಇಲ್ಲ. ತುಂಬ ದುಃಖದಿಂದ ಜೀವನವೇ ಮುಗಿತು ಅಂತ ಸ್ಮಶಾನಕ್ಕೆ ತಲುಪಿದವರು ಸದ್ಯದ ಪರಿಸ್ಥಿತಿಯಲ್ಲಿ ತುಂಬಾ ಆರಾಮಾಗಿಸ್ತಾ ಇದ್ದಾರೆ. ಎಲ್ಲವೂ ಕ್ಷಣಿಕ ನೋವು ಯೋಚನೆ ಪರಿಸ್ಥಿತಿಗಳು ಎಲ್ಲವೂ ಕೂಡ. ಒಂದಷ್ಟು ಸಮಯದವರೆಗೆ ಕಾಡುತ್ತವೆ ಅವುಗಳನ್ನು ಎದುರಿಸಿ ಬದುಕುವುದಕ್ಕೆ ಸಾಧ್ಯವಿದೆ ಅಂತ ತೋರಿಸಿದರೆ ಅವುಗಳೆಲ್ಲೋ ಬದಿಗೆ ಸರಿದು ನಿಲ್ಲುತ್ತವೆ. ದೂರದಲ್ಲಿ ತಮಟೆ ಶಬ್ದ ಕೇಳುತ್ತಿತ್ತು ಹಾಗಾಗಿ ಹೊಸ ಚಟ್ಟದ ಹೊಸ ಕಥೆಯನ್ನು ಕೇಳುವುದಕ್ಕೆ ಎಲ್ಲ ಚಟ್ಟಗಳು ಕಾತುರತೆಯಿಂದ ಕಾಯ್ತಾ ಇದ್ದವು

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ