ಸ್ಟೇಟಸ್ ಕತೆಗಳು (ಭಾಗ ೫೪೨) - ಬಾಂಧವ್ಯ

ಸ್ಟೇಟಸ್ ಕತೆಗಳು (ಭಾಗ ೫೪೨) - ಬಾಂಧವ್ಯ

ತುಮಕೂರಿಗೆ ಪಯಣಿಸಲೇ ಬೇಕಿತ್ತು. ರೈಲು ನಿಲ್ದಾಣ ತಲುಪಿದಾಗ ರೈಲು ಹೊರಟಿತ್ತು. ಏನು‌ ಮಾಡುವುದೆಂದು ತಿಳಿಯದೆ ಅತ್ತಿತ್ತ ನೋಡುತ್ತಿದ್ದಾಗ ಅವರು ಕರೆದರು. ಕಿದರ್? ಬೆಂಗಳೂರು. ಆವೋ.... ಬಿಳಿ ಅಂಗಿ ಕಪ್ಪು ಪ್ಯಾಂಟು. ಈ ರೈಲು ಹೊರಡುವಾಗ ಹಸಿರು ಬಾವುಟ ತೋರಿಸ್ತಾ ರೈಲಿನ ಒಳಗೆ ಇರ್ತಾರಲ್ಲ ಅವರು. ಅವರದೇ ಕೊಠಡಿಯಲ್ಲಿ ಕುಳಿತು ಪಯಣ ಆರಂಭವಾಯಿತು. ಒಂದಷ್ಟು ಕುಶಲೋಪರಿ ನನಗೆ ಹಿಂದಿ ಅಷ್ಟೇನು ಬರುವುದಿಲ್ಲ, ಅವರಿಗೆ ಕನ್ನಡದ ಹಾಗೆ. ಇಬ್ಬರೂ ಅರ್ಥ ಮಾಡಿಕೊಂಡು 7 ಗಂಟೆಗಳ ಪಯಣವನ್ನ ಮುಗಿಸಿದೆವು. ಅವರೊಂದು ಕಡೆ ತಿನ್ನೋದಕ್ಕೂ ಕೊಡಿಸಿದರು. ನನಗೆ ಒಬ್ಬ ಅಣ್ಣ ಇದ್ದಿದ್ರೆ ಹೇಗೆ ನೋಡ್ಕೋತ್ತಾನೋ ಹಾಗೆ ಜೊತೆಯಾದ್ರು. ಇವತ್ತು ಪಯಣಿಸಲೇ ಬೇಕಿತ್ತಲ್ವಾ. ಅವರು ದೇವರ ಹಾಗೆ ಬಂದ್ರು. ದೇವರೇ ಬಂದಿರಬಹುದಲ್ವಾ? ಮನುಷ್ಯ ಸಂಬಂದ ಅನ್ನೋದು ದೊಡ್ಡದು ಕಣಾ... ಗುರುತಿಲ್ಲ ಪರಿಚಯವಿಲ್ಲ.. ನಾವಿಬ್ಬರು ಮನುಷ್ಯರು ಅನ್ನೋದು ಬಿಟ್ಟು ಬೇರೇನೂ ಗುರುತಿಲ್ಲ. 

ಧನ್ಯವಾದ ಬಿಟ್ಟು ಬೇರೇನೂ ಹೇಳೊದ್ದಕ್ಕೆ ಸಾದ್ಯವಾಗಿಲ್ಲ.‌ ಅವರು ಹೇಳಿದ್ದಿಷ್ಟೆ. ಇದನ್ನ ದಾಟಿಸಿಬಿಡಿ ಯಾರಿಗಾದರೂ ಅವರು ಬೇರೆಯವರಿಗೆ. ಹೀಗೆ ಬಾಂಧವ್ಯ ಮುಂದುವರಿಯಲಿ ಅಂತ…

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ