ಸ್ಟೇಟಸ್ ಕತೆಗಳು (ಭಾಗ ೫೪೭) - ಮಾತು

ಸ್ಟೇಟಸ್ ಕತೆಗಳು (ಭಾಗ ೫೪೭) - ಮಾತು

ಬದುಕು ಚೆನ್ನಾಗಿರಬೇಕಾದರೆ ಹೇಗಿರಬೇಕು? ಅಜ್ಜನಲ್ಲಿ ಕೇಳಿದೆ. ಏಕೆಂದರೆ ಅವರು ಬದುಕನ್ನ ತುಂಬಾ ಅನುಭವಿಸಿದ್ದರು. ಬದುಕಿನ ಏರಿಳಿತಗಳನ್ನ ಎಲ್ಲವನ್ನ ಅನುಭವಿಸಿದವರು. ಹಾಗೆ ಒಪ್ಪಿಕೊಂಡು ನಡೆದವರು.ಅವರು  ಹೇಳಿದ್ದು ಇಷ್ಟೆ." ಮೊದಲು ನಮ್ಮನ್ನ ನಾವು ಸಂಭ್ರಮಿಸಿಕೊಳ್ಳಬೇಕು, ನಮಗೆ ನಾವೇ ಸಂಭ್ರಮವಾಗದಿದ್ದರೆ ನಾವು ಬೇರೆಯವರಿಗೆ ಸಂಭ್ರಮವಾಗುವುದಿಲ್ಲ. ಮತ್ತೆ ನಾವು ಮಾಡುವ ತಪ್ಪುಗಳನ್ನು ನಾವು ಕ್ಷಮಿಸಿ ನಮ್ಮನ್ನೇ ನಾವು ಬೆನ್ನು ತಟ್ಟಿಕೊಂಡು ಮುಂದುವರಿತೇವೆ. ಹಾಗಾದರೆ ಬೇರೆಯವರು ಮಾಡುವ ತಪ್ಪುಗಳನ್ನು ಕ್ಷಮಿಸಬೇಕಲ್ವಾ. ನಾವು ಸಂಪಾದಿಸಬೇಕು ದುಡ್ಡಿನ ಜೊತೆಗೆ ನಮ್ಮ ಸಾಧನೆಯನ್ನು ಅವರ ಸಾಧನೆ ಅಂತ ಖುಷಿ ಪಡೋರನ್ನ, ನಮ್ಮ ನೋವನ್ನ ಅವರ ನೋವು ಅಂತ  ಜೊತೆಗೆ ನಿಂತು ನಡೆಯುವವರನ್ನು, ನಮ್ಮನ್ನು ಇದ್ದಹಾಗೆ ಒಪ್ಪಿಕೊಂಡು ಅಪ್ಪಿಕೊಂಡವರನ್ನು ಸಂಪಾದಿಸಿದರೆ ಸಾಕು. ಇದಿಷ್ಟೇ ಬದುಕಿನ ಮರ್ಮ. ಎನ್ನುತ್ತಾ ಎಂಬತ್ತರ ವಯಸ್ಸಿನಲ್ಲೂ ಕೆಲಸದ ಕಡೆಗೆ ಗದ್ದೆಗೆ ಹೊರಟರು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ