ಸ್ಟೇಟಸ್ ಕತೆಗಳು (ಭಾಗ ೫೫೨) - ಸಮಯ

ಸ್ಟೇಟಸ್ ಕತೆಗಳು (ಭಾಗ ೫೫೨) - ಸಮಯ

ಕೈಯಲ್ಲಿ ಗಡಿಯಾರ ಕಟ್ಟಿಕೊಂಡು ತುಂಬಾ ಅಂದವಾಗಿದೆ ಅಂತ ಎಲ್ಲರ ಮುಂದೆ ತೋರಿಸಿಕೊಂಡು ಈ ಗಡಿಯಾರವನ್ನು ನಾನು ಖರೀದಿಸಿದ್ದೇನೆ ಎನ್ನುವ ಅಹಂಕಾರ ಮನದೊಳಗಿದ್ದರೂ ಸಹ ಗಡಿಯಾರದ ಮುಳ್ಳುಗಳು ನಾವು ಹೇಳಿದ ಹಾಗೆ ನಡೆಯುವುದಿಲ್ಲ. ಸಮಯವನ್ನ ತೋರಿಸುವ ಕೆಲಸವನ್ನ ಕ್ಷಣ ಬಿಡದೆ ನಿರಂತರ ಮಾಡುತ್ತಲೇ ಇರುತ್ತದೆ. ಕಾಲ ನಿಲ್ಲೋದಿಲ್ಲ ಅಲ್ಲದೇ ಕಾಲ ಯಾವತ್ತೂ ಯಾವ ಕ್ಷಣದಲ್ಲಿ ಹೀಗೆ ಆಗಬೇಕು. ನಿನ್ನೆಯವರೆಗೂ ಮಾತನಾಡಿಕೊಂಡಿದ್ದೇವೆ ನಾವು ತುಂಬಾ ನಂಬಿಕೊಂಡಿದ್ದವರು ಅವರನ್ನು ನಂಬಿ ಒಂದಷ್ಟು ಕೆಲಸವನ್ನು ನಿರ್ವಹಿಸಿದ್ದೇವೆ. ಅಂಥಹ ನಮ್ಮ ಆತ್ಮೀಯರು ಗೊತ್ತಿಲ್ಲದೆ ಮಾಯವಾಗಿ ಬಿಡಬಹುದು. ಒಂದು ದುರಭ್ಯಾಸವಿಲ್ಲದವರು ಪ್ರತಿದಿನವೂ ದೇಹದಂಡನೆ ಮಾಡುತ್ತಾ ಆರೋಗ್ಯವನ್ನು ಕಟ್ಟು ನಿಟ್ಟಾಗಿ ಕಾಪಾಡಿಕೊಂಡವರು ಉಸಿರು ನಿಲ್ಲಿಸಿ ಬಿಡಬಹುದು. ಸಂಭ್ರಮದ ಕಾರ್ಯಕ್ರಮದ ನಡುವೆ ಸೂತಕ ಒಂದು ಹಾದು ಹೋಗಬಹುದು. ನಗುವ ಮುಖದಲ್ಲಿ ಕ್ಷಣದಲ್ಲಿ ಕಣ್ಣೀರು ಜಾರಬಹುದು. ಕಾಲದ ಕ್ಷಣಿಕ ಕೆಲಸವಿದು. ಇದನ್ನೆಲ್ಲಾ ಆಗಾಗ ಮನಸ್ಸಿನೊಳಗೆ ಯೋಚಿಸಿಕೊಳ್ಳುತ್ತಾ ಬದುಕಿದ್ರೆ ಮಾತ್ರ ನಾವು ಮನುಷ್ಯರಾಗಿ ಬಿಡುತ್ತೇವೆ. ನಾಳೆ ಅನ್ನುವುದು ಬರುತ್ತೆ ಅನ್ನೋದು ನಾಳೆಗೆ ಗೊತ್ತಿರುವುದಿಲ್ಲ. ನಾವು ಅದನ್ನ ಇವತ್ತೇ ನಿರ್ಧಾರ ಮಾಡುವುದು ಹೇಗೆ? ಏನೇ ಮಾಡೋದಿದ್ರು ಈ ಕ್ಷಣ ಮಾಡಿಬಿಡಬೇಕು. ಇಷ್ಟೆಲ್ಲಾ ನಾನು ನನಗೆ ಹೇಳಿಕೊಂಡ ಕಾರಣ ಇಷ್ಟೇ, ಆಲೋಚನೆಗಳನ್ನ ಗಂಟುಕಟ್ಟಿ ಮನಸ್ಸು ಒಳಗೆ ತುಂಬಿಸಿ ಇಟ್ಟುಕೊಂಡಿದ್ದೇನೆ. ಎಷ್ಟು ದಿನ ಗಂಟು ಕಟ್ಟಿ ಗೆದ್ದಲು ಹಿಡಿಸಿಕೊಳ್ಳುವುದು ಅದಕ್ಕೆ ಇವತ್ತಿಂದ ಕೆಲಸ ಮಾಡೋದಕ್ಕೆ ನಿರ್ಧಾರ ಮಾಡಿದ್ದೇನೆ, ಇಷ್ಟೆಲ್ಲ ಯೋಚನೆಯನ್ನು ಅವನು ಮಾಡುವುದಕ್ಕೆ ಕಾರಣ ಆ ದಿನ ಅವನ ಜೊತೆಗಿದ್ದ ಆ ವ್ಯಕ್ತಿಯನ್ನು ಅವನು ಕಳೆದುಕೊಂಡಿದ್ದ. ಅವರಲ್ಲಿ ಹೇಳುವುದಕ್ಕ ಒಂದಷ್ಟು ಮಾತುಗಳಿದ್ದು ಅವರಿಂದ ಕೇಳುವುದಕ್ಕೂ ಒಂದಷ್ಟು ಮಾತುಗಳಿದ್ದವು. ದಿನಾ ದೂಡಿದ್ದಕ್ಕೆ ಅವುಗಳೆಲ್ಲ ಹಾಗೆ ಅವರೊಂದಿಗೆ ಸುಟ್ಟುಹೋದವು... ಇನ್ನಾದ್ರು ಬದಲಾಗಬೇಕಲ್ವಾ..

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ