ಸ್ಟೇಟಸ್ ಕತೆಗಳು (ಭಾಗ ೫೫೫) - ಗಾಡಿ ಮಾತು
ನಮ್ಮ ಮನೆಯ ಗಾಡಿಗಳು ನಮ್ಮೊಂದಿಗೆ ಮಾತನಾಡುತ್ತವೆ. ಆದರೆ ನಮಗದು ಇಷ್ಟರವರೆಗೆ ಕೇಳಿಸಿಯೇ ಇಲ್ಲ. ಯಾರಿಗೆ ಭಾಷೆ ಅರ್ಥ ಆಗುತ್ತೋ ಅಂಥವರು ಅದರ ಮಾತನ್ನು ಕೇಳಿ ಅದಕ್ಕೆ ಬೇಕಾದನ್ನು ನೀಡಿ ಅದನ್ನ ತುಂಬ ಸಮಯದವರೆಗೆ ಜೀವಂತವಾಗಿ ಇರಿಸಿಕೊಂಡಿದ್ದಾರೆ. ನಮಗೆ ನಮ್ಮದೇ ಯೋಚನೆಗಳು ಹೆಚ್ಚು, ನಮ್ಮ ಗಾಡಿಯಿಂದ ಅಲ್ಲಾ, ಪ್ರತಿಯೊಂದು ಗಾಡಿಯು ಮಾತನಾಡುತ್ತವೆ. ಕೇಳುವ ಸಾಮರ್ಥ್ಯ ಬೇಕು. ಕೇಳಿದ್ದನ್ನ ಅರ್ಥ ಮಾಡಿಕೊಳ್ಳುವ ಶಕ್ತಿಯೂ ಇರಬೇಕು. ನಾವು ಬಿಡುವ ಗಾಡಿಯ ಒಳಗೆ ಆಗಿರುವ ಸಣ್ಣಪುಟ್ಟ ಲೋಪದೋಷಗಳು, ಒಳಗೆ ಅದು ಅನುಭವಿಸುತ್ತಿರುವ ತೊಂದರೆಗಳನ್ನು ಒಂದಷ್ಟು ಶಬ್ದಗಳ ಮೂಲಕ ನಮ್ಮೊಂದಿಗೆ ಸಂವಹನ ಮಾಡಲು ಪ್ರಯತ್ನಿಸುತ್ತದೆ. ನಾವು ಅದನ್ನ ಅರ್ಥ ಮಾಡಿಕೊಂಡು ಅದಕ್ಕೆ ಸರಿಯಾದ ಪರಿಹಾರ ಸೂಚಿಸಿದರೆ ಅದು ಇನ್ನೊಂದಷ್ಟು ವರ್ಷ ಹೆಚ್ಚು ಬದುಕೋದಕ್ಕೆ ಸಾಧ್ಯವಾಗುತ್ತದೆ. ಒಂದು ಸಲ ನಿಮ್ಮ ಬಳಿ ಇರುವಂತಹ ವಾಹನದ ಮಾತುಗಳನ್ನು ಒಮ್ಮೆ ಆಲಿಸಿ ನೋಡಿ ಅದಕ್ಕೆ ಬೇಕಾಗಿರುವುದನ್ನ ಸಣ್ಣಪುಟ್ಟ ವಿಚಾರವಾದರೂ ಆಗಲೇ ಕೊಟ್ಟುಬಿಡಿ. ಮುಂದೊಂದು ದಿನ ದೊಡ್ಡ ತೊಂದರೆಯಿಂದ ಪಾರಾಗುವುದಕ್ಕೆ ಸಣ್ಣಪುಟ್ಟ ಹೆಜ್ಜೆಗಳು ತುಂಬಾ ಪರಿಣಾಮಕಾರಿಯಾಗಿರುತ್ತದೆ. ಒಂದು ಸಲ ಕಿವಿಯಾನಿಸಿ ನೋಡಿ ಪರಿಹಾರ ಸಿಕ್ರೂ ಸಿಗಬಹುದು...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ