ಸ್ಟೇಟಸ್ ಕತೆಗಳು (ಭಾಗ ೫೫೬) - ಅನರ್ಥ

ಹಕ್ಕಿಗಳು ಹಾರುವ ಸಮಯವಲ್ಲ ಆದರೂ ಹಲವು ಹಕ್ಕಿಗಳು ತುಂಬ ನೋವಿನಿಂದ ಒಂದೇ ಕಡೆಯಿಂದ ಇನ್ನೊಂದು ಕಡೆಗೆ ಹಾರಿ ಹೋಗುತ್ತಿವೆ ಯಾರಿಗೋ ಶಾಪವನ್ನು ಬೇರೆ ಹಾಕುತ್ತಾ ಜನರಿಗೆ ಬೈಯುತ್ತಿದ್ದಾವೆ .ಯಾಕೆ ಅಂತ ನಿಲ್ಲಿಸಿ ನಾನು ಪ್ರಶ್ನೆ ಮಾಡಿದೆ ಅದಕ್ಕೆ ಹಕ್ಕಿಗಳು "ನೀವೆಲ್ಲರೂ ಒಂದೇ ಹೇಳೋದೊಂದು ಮಾಡೋದೊಂದು, ನಿಮ್ಮನ್ನು ಮನುಷ್ಯ ಅಂತ ಕರೆದಿರುವವರು ಯಾರು? ನಿಮಗೆ ಒಳ್ಳೆಯ ಯೋಚನೆಗಳು ಇದೆ ಅಂತ ಹೇಳಿದವರು ಯಾರು ?. ಸರ್ಕಾರದವರು ಅಲ್ಲೊಂದು ಅರಣ್ಯ ಅಧಿಕಾರಿಯವರ ಕಚೇರಿ ಕಟ್ಟಬೇಕು ಅಂತ ನಿರ್ಣಯ ಮಾಡಿದ್ದಾರೆ ಮತ್ತು ಅರಣ್ಯ ಅಧಿಕಾರಿಗಳಿಗೆ ಸಭೆ ಸಮಾರಂಭ ನಡೆಸುವುದಕ್ಕೆ ಒಂದು ದೊಡ್ಡ ಸಭಾಂಗಣ, ಅವರಿಗೆ ಹಲವಾರು ಮನೆಗಳು ದೊಡ್ಡದೊಂದು ಕಚೇರಿ ಇಷ್ಟೆಲ್ಲವನ್ನು ಕಟ್ಟೋದಕ್ಕೆ ಅರ್ಧ ಕಾಡನ್ನೇ ಕಡಿದು ನೆಲಸಮ ಮಾಡಿ ಕಾಂಕ್ರೀಟ್ ಮನೆಯನ್ನು ನಿರ್ಮಿಸುತ್ತಿದ್ದಾರೆ. ಅರಣ್ಯ ರಕ್ಷಿಸುವ ಅಧಿಕಾರಿಗಳು ಅಂತ ಹೆಸರನ್ನು ತೆಗೆದುಕೊಂಡರೆ ಅದಕ್ಕೇನು ಅರ್ಥ? ರಕ್ಷಿಸಬೇಕಾದವರೇ ಭಕ್ಷಿಸುವಂತವದರೆ ನೀವು ಕೂತಿರುವ ಅಧಿಕಾರಕ್ಕೆ ಮೌಲ್ಯ ಇದಿಯಾ? ಕಾಯುವವರೇ ಕಳ್ಳರಾದಾಗೆ ಆಯ್ತು. ನಿಮ್ಮ ಜನ್ಮಕ್ಕೆ"
ಹಕ್ಕಿಗಳು ಹಾರಿ ಹೋದವು. ಆ ದಿನದ ಪತ್ರಿಕೆಯಲ್ಲಿ ಅರಣ್ಯ ಅಧಿಕಾರಿಗಳ ನೂತನ ಕಟ್ಟಡಗಳಿಗೆ ಶಿಲನ್ಯಾಸ ಎನ್ನುವುದು ಮುಖಪುಟದಲ್ಲಿ ರಾರಾಜಿಸುತ್ತಿತ್ತು. ಅಧಿಕಾರಿಗಳು ಅತ್ತ ಕಡೆಗೆ ತೆರಳುವ ಸೈರನ್ ಶಬ್ದ ರಸ್ತೆ ಮೇಲೆ ಓಡುತ್ತಿತ್ತು…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ