ಸ್ಟೇಟಸ್ ಕತೆಗಳು (ಭಾಗ ೫೫೭) - ಸಂಗೀತ

ಸ್ಟೇಟಸ್ ಕತೆಗಳು (ಭಾಗ ೫೫೭) - ಸಂಗೀತ

ಆಗಾಗ ನನಗೆ ಅನಿಸುವುದುಂಟು, ಈ ಚಲನಚಿತ್ರದಲ್ಲಿ ಒಂದೊಂದು ಭಾವಗಳಿಗೆ ಒಂದೊಂದು ಹಿನ್ನೆಲೆ ಸಂಗೀತ ಕೇಳ್ತಾ ಇರ್ತದೆ  ಆ ಹಿನ್ನೆಲೆ ಸಂಗೀತವನ್ನ ಕೇಳ್ತಾ ಇದ್ದಾಗ ಆ ಭಾವಗಳಿಗೆ ಇನ್ನೊಂದಷ್ಟು ಹೆಚ್ಚು ಮೌಲ್ಯ ಸಿಕ್ತದೆ ಆ ಭಾವಗಳು ಇನ್ನಷ್ಟು ಹೆಚ್ಚುರಸಮಯವಾಗುತ್ತದೆ. ಹಾಗೆ ನಮ್ಮ ಜೀವನದಲ್ಲೂ ನಮ್ಮ ಪ್ರತಿ ಒಂದು ಸನ್ನಿವೇಶಗಳಿಗೂ ಒಂದು ಹಿನ್ನೆಲೆ ಸಂಗೀತ ಮೂಡ್ತಾ ಇರಬೇಕು ಅಲ್ವಾ? ನಮಗೆ ಖುಷಿಯಾದಾಗ ಸುಮಧುರವಾದದ್ದು ತುಂಬ ನೋವಾದಾಗ ಆ ನೋವನ್ನ ಅನುಭವಿಸುವುದಕ್ಕೆ ಸಾಧ್ಯವಾಗುವಂತಹ ಹಿನ್ನೆಲೆ ಸಂಗೀತ ಸಿಟ್ಟಿಗೆ ಒಂದು, ಕ್ರೋಧಕೊಂದು, ಅದ್ಭುತಕ್ಕೊಂದು, ಹಾಸ್ಯಕ್ಕೊಂದು ಹೀಗೆ ಒಂದೊಂದು ಭಾವಗಳಿಗೆ ಒಂದೊಂದು ಹಿನ್ನೆಲೆ ಸಂಗೀತ ಸಿಗುತ್ತಾ ಹೋದರೆ ಬದುಕು ಅದೆಷ್ಟು ರಸ ನಿಮಿಷವಾಗಿರಬಹುದು. ನಾವು ಈ ಕಾರಣಕ್ಕೋಸ್ಕರ ಯಾವುದೋ ಹಿನ್ನೆಲೆ ಸಂಗೀತವನ್ನು ನಮ್ಮ ಭಾವಗಳಿಗೆ ಹೋಲಿಸಿಕೊಂಡು ಅದನ್ನು ಕೇಳುತ್ತಾ ಬದುಕ್ತಾ ಇರುತ್ತೇವೆ. ನಮ್ಮ ಬದುಕಿಗೆ ನಾವೇ ಒಂದಷ್ಟು ಹಿನ್ನೆಲೆ ಸಂಗೀತಗಳನ್ನ ಸೃಷ್ಟಿಸುವಂತಿರಬೇಕು ಅಥವಾ ಭಗವಂತನೇ ಸೃಷ್ಟಿಸಿ ಕಳಿಸಬೇಕು. ಆಗ ಮೌನವಾಗಿರುವ ಬದುಕಲ್ಲಿ ಒಂದಷ್ಟು ಸಂಗೀತ ರಸ ಸಂಜೆಗಳನ್ನು ಅನುಭವಿಸಬಹುದು. ಇಷ್ಟೆಲ್ಲ ಆಲೋಚನೆ ಬರೋದಕ್ಕೆ ಕಾರಣ ಎಂದರೆ ಬೇಜಾರಾಗಿತ್ತು, ಆ ಬೇಜಾರಿಗೆ ಹೊಂದುವಂತಹ ಯಾವುದೇ ಹಿನ್ನೆಲೆ ಸಂಗೀತ ನನ್ನ ಮೊಬೈಲಲ್ಲಿ ಸಿಗಲಿಲ್ಲ .ಅದಕ್ಕಾಗಿ ಈ ಯೋಚನೆ ಬಂದಿರಬಹುದು ನಿಮ್ಮ ಬದುಕಿಗೆ ಇಷ್ಟವಾಗಿರುವ ಹಿನ್ನೆಲೆ ಸಂಗೀತ ಯಾವುದಾದರೂ ಇದ್ದರೆ ನನಗೂ ಕಳಿಸಿಕೊಡಿ. ನಾನು ಕೇಳಿ ನನ್ನ ಬದುಕಿಗೆ ಅದು ಹೊಂದಿಕೆಯಾಗುತ್ತಾ ಅಂತ ಯೋಚಿಸಿ ನೋಡುತ್ತೇನೆ

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ