ಸ್ಟೇಟಸ್ ಕತೆಗಳು (ಭಾಗ ೫೬೯) - ನಾಲಿಗೆ ಮತ್ತು ಮನಸ್ಸು

ಸ್ಟೇಟಸ್ ಕತೆಗಳು (ಭಾಗ ೫೬೯) - ನಾಲಿಗೆ ಮತ್ತು ಮನಸ್ಸು

"ನಿನಿಗ್ಯಾವತ್ತು ಒಳ್ಳೆದಾಗಲ್ಲಾ ನೀನು ಹಾಳಾಗಿಹೋಗು" "ಹೇ ಹೀಗೆ ಹೇಳಬೇಡ ,  ದೇವರು ತಥಾಸ್ತು ಅಂತ ಹೇಳ್ತಾ ಇರುತ್ತಾರೆ ನೀನು ಹೇಳಿದ ಹಾಗೆ ಆಗಿಬಿಟ್ಟರೆ, ನನ್ನ ಬದುಕು ನಾಶವಾದಿತು. "ಅಯ್ಯೋ ಈ ನಾಲಿಗೆ ಮತ್ತು ಮನಸ್ಸು ಇದಿಯಲ್ಲ ಇದು ಎಲ್ಲಾ ಕಡಗೂ ಜೊತೆಗೆ ಸೇರಿಕೊಂಡು ಕೆಲಸ ಮಾಡುವುದಿಲ್ಲ. ನಾಲಗೆ ಹೇಳಿದ್ದನ್ನು  ಮನಸ್ಸು ಕೂಡ ಹೇಳಬೇಕು ಅಂತ ಏನೂ ಇಲ್ಲ. ಮನಸ್ಸು ಯೋಚಿಸಿದ್ದನ್ನ ನಾಲಗೆ ಹೇಳಬೇಕು ಅಂತಾನೂ ಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನಾಲಿಗೆ ಮತ್ತು ಮನಸ್ಸುಗಳು ಜೊತೆಯಾಗಿ ಕೆಲಸ ಮಾಡುವುದೇ ಕಡಿಮೆ. ನಾಲಗೆ ಸಿಹಿ ನೀಡಿದರೆ ಮನಸ್ಸು ಕಹಿ ರಾಶಿಗಳನ್ನು ತುಂಬಿಕೊಂಡಿರುತ್ತೆ. ಮನಸ್ಸು ಸಿಹಿಯ ಮೂಟೆ ಮೇಲೆ ಕೂತಿದ್ರೆ ನಾಲಿಗೆ ಕಹಿಯನ್ನು ಉಗುಳುತ್ತಾ ಇರುತ್ತೆ. ಅದಲ್ಲದೆ ದೇವರು ಹೀಗಾಗಬೇಕು ಅಂತ ನಿರ್ಣಯ ಮಾಡಿರುತ್ತಾನೆ. ಅದಲ್ಲದೆ ಅವನು ಒಂದಷ್ಟು ದಾರಿಗಳನ್ನು ಕೂಡ ತೋರಿಸಿರುತ್ತಾನೆ. ಈ ದಾರಿಯಲ್ಲಿ ಹೋದರೆ ಹೀಗಾಗುತ್ತೆ ಇಂಥವರ ಜೊತೆ ಸೇರಿದ್ರೆ ಹೀಗಾಗುತ್ತದೆ. ನಾವು ದಾರಿ ತಪ್ಪಿ ದೇವರನ್ನು ಬಯ್ಯೋದು ಎಷ್ಟು ಸರಿ? ಆ ವಿಚಾರ ಬಿಡು ಹೇಳಿದ್ದೆಲ್ಲ ಹಾಗೆ ಆಗುತ್ತೆ ಅನ್ನೋ ಮಾತಿದೆಯಲ್ಲ ಇದನ್ನ ನಾನು ಒಪ್ಪಿಕೊಳ್ಳುವುದಿಲ್ಲ. ನಾಲಿಗೆಯಲ್ಲಿ ಯಾರು ಕೆಟ್ಟದ್ದನ್ನ ಬಯಸ್ತಾನೋ ಅವನ ಮನಸ್ಸನ್ನು ಅದೇ ರೀತಿ ಕಲ್ಮಶ ಇರಬೇಕೆಂದೇನೂ ಇಲ್ಲ. ನಾಲಿಗೆ ಮತ್ತು ಮನಸ್ಸು ಎರಡು ನಿರ್ಧಾರ ಮಾಡಿರುವುದನ್ನು ದೇವರು ಕೂಡ ನಿರ್ಧಾರ ಮಾಡಿದ್ರೆ ಮಾತ್ರ ಹಾಗಾಗುತ್ತೆ ವಿನಃ ಯಾರೋ ಒಬ್ಬರು ಹೇಳಿದ ಕೂಡಲೇ ಆಗುತ್ತೇ ಅನ್ನೋದು ತಪ್ಪು. ನಿನಗೆ ನಿನ್ನ ಮೇಲೆ ನಂಬಿಕೆ ಇದ್ದರೆ ನಿನಗೆ ನಿನ್ನ ಜೀವನದಲ್ಲಿ ಒಳಿತೇ ಆಗುತ್ತೆ. ಕೆಟ್ಟದಾಗುವ ಯೋಚನೆ ಇದ್ದರೆ ಒಳಿತೇ ಆಗುವುದಿಲ್ಲ. ಇದು ಮಾತ್ರ ಸತ್ಯ."

" ಅದು ಏನು ಮಾತು ಅಂತ ಆಡಿದ್ಯೋ, ನನಗಂತೂ ದೇವರಾಣೆ ಏನೂ ಅರ್ಥ ಆಗ್ಲಿಲ್ಲ. ಆದ್ರೂ ಕೇಳಿಕೊಳ್ಳುವುದಿಷ್ಟೇ ದಯವಿಟ್ಟು ಕೆಟ್ಟದಾಗ್ಬೇಕು ಅಂತ ಒಂಚೂರು ಕೂಡ ಬಯಸಬೇಡ. ದೇವರು ತಥಾಸ್ತು ಹೇಳುತ್ತಿರುತ್ತಾನೆ... ಅರ್ಥವಾಗದವರ ಮುಂದೆ ಎಷ್ಟು ಮಾತನಾಡಿದರೂ ವ್ಯರ್ಥ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ