ಸ್ಟೇಟಸ್ ಕತೆಗಳು (ಭಾಗ ೫೮೫) - ದೂರ

ಸ್ಟೇಟಸ್ ಕತೆಗಳು (ಭಾಗ ೫೮೫) - ದೂರ

ಸಂಜೆ ಸೂರ್ಯ ಮನೆ ಕಡೆಗೆ ಹೊರಟಿದ್ದಾನೆ. ಕೆಲಸ ಮುಗಿಸಿದವರೆಲ್ಲ ತಮ್ಮ ನಿವಾಸದ ಕಡೆಗೆ ತಮ್ಮ ತಮ್ಮ ಗಾಡಿಗಳನ್ನು ಹಿಡಿದು ವೇಗವಾಗಿ ಸಾಗುತ್ತಿದ್ದಾರೆ. ಅಲ್ಲೇ ರಸ್ತೆ ಬದಿಯ ಪಕ್ಕದಲ್ಲಿ ಸಣ್ಣ ಮೋರಿಯ ಮೇಲೆ ಕುಳಿತುಕೊಂಡ ಆ ಇಬ್ಬರೂ ಕುಶಲೋಪರಿ ವಿಚಾರಿಸಿಕೊಳ್ಳುತ್ತಿದ್ದಾರೆ. ಅವರ ಮುಖ ಚಹರೆ ಮಾತಿನ ಭಾವ ನೋಡಿದರೆ ಅಮ್ಮ ಮತ್ತು ಮಗ ಅನ್ನಿಸುತ್ತಿದೆ. ಇಲ್ಲಿ ಕುಳಿತು ಮಾತನಾಡುತ್ತಿರುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಯಾಕೆ ಅನ್ನೋದು ನನ್ನ ಅರಿವಿಗೆ ಮೊದಲು ಬಂದಿರಲಿಲ್ಲ. ಅವರು ಕೇಳಿದ ಒಂದು ಮಾತಿನಿಂದ ಸಣ್ಣ ಸಹಾಯಕ್ಕಾಗಿ ಬಳಿ ತೆರಳಿದವನಿಗೆ ಜೀವನದ ಅದ್ಭುತ ಸತ್ಯಗಳು ಪರಿಚಯ ಆಗೋದವು. ಮನೆಯಲ್ಲಿ ಮನಸ್ತಾಪ ತಾಯಿಯೊಂದು ಕಡೆ ತಂದೆಯೊಂದು ಕಡೆ. ಮಕ್ಕಳಿಬ್ಬರು ಎರಡು ಕಡೆ ಬದುಕ್ತಾ ಇದ್ದಾರೆ. ಮಕ್ಕಳಿಗೆ ಇಬ್ಬರ ಪ್ರೀತಿಯೂ ಬೇಕು. ಅಹಂಕಾರ ಪರಿಸ್ಥಿತಿ ಒಟ್ಟು ಸೇರೋದ್ದಕ್ಕೆ ಬಿಡದ ಕಾರಣ ಆಗಾಗ ಮಗ ಬಂದು ಅಮ್ಮನನ್ನು ಮಾತನಾಡಿಸಿಕೊಂಡು ಹೋಗ್ತಾನೆ. ಅಮ್ಮನೇ ಬೇಕು ಅಂದ್ರೆ ಪ್ರೀತಿಯ ಅಪ್ಪ ಸಿಗೋದಿಲ್ಲ. ದುಡ್ಡಿನ ಅಹಂಕಾರ ಅವರ ನಡುವೆ ಮಾತನಾಡಿತ್ತು. ಸಂಬಂಧಗಳಿಗೆ ದುಡ್ಡಿನ ಚೌಕಟ್ಟುಗಳನ್ನು ಎಳೆದುಕೊಂಡು ಒಂದೊಂದು ದಿಕ್ಕಿನಲ್ಲಿ ಬದುಕ್ತಾ ಇದ್ದಾರೆ. ದೂರ ಬೇಕಾಗಿರೋದು ವ್ಯಕ್ತಿಗಳನ್ನಲ್ಲ ಆಲೋಚನೆಗಳನ್ನು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ