ಸ್ಟೇಟಸ್ ಕತೆಗಳು (ಭಾಗ ೫೯೧) - ಬುದ್ಧ

ಸ್ಟೇಟಸ್ ಕತೆಗಳು (ಭಾಗ ೫೯೧) - ಬುದ್ಧ

ಸಣ್ಣದೊಂದು ಅಂಗಡಿ ಅಲ್ಲಿ ಒಂದಷ್ಟು ವ್ಯಾಪಾರ ನಡೀತಾನೆ ಇರುತ್ತೆ. ಆದರೆ ಆ ಅಂಗಡಿಗೆ ಜನ ಬರುವುದು ಕಡಿಮೆ. ಅಂಗಡಿಯ ಯಜಮಾನನಿಗೆ ಒಂದು ಚೂರು ಸಿಟ್ಟು ಹೆಚ್ಚೇ ಇದೆ. ಮಾತು ಎತ್ತಿದರೆ ಜಗಳವೇ ಅವರ ಮೊದಲ ಮಂತ್ರ. ಒಂದು ಕ್ಷಣದ ಮೌನ, ಪ್ರೀತಿಯ ಮಾತು ಅದ್ಬುತವನ್ನೇ ಸಾಧಿಸಬಹುದು ಅಂತ ಅವರಿಗೆ ಇಷ್ಟರವರೆಗೂ ಅರ್ಥನೇ ಆಗಲಿಲ್ಲ. ಆದರೆ ವಿಚಿತ್ರ ಏನು ಅಂತ ಅಂದ್ರೆ ಅವರು ಪ್ರತಿದಿನ ಬುದ್ಧನ ಪುಟ್ಟದಾದ ಮೂರ್ತಿಗೆ ಹೂ ತಂದಿಟ್ಟು ದೀಪ ಬೆಳಗಿ ಕೈಮುಗಿತಾರೆ, ಒಂದು ದಿನವೂ ಬುದ್ಧನೊಳಗಿನ ಶಾಂತಿ ಅವರಲ್ಲಿ ಕಂಡು ಬರಲೇ ಇಲ್ಲ. ಅಲ್ಲದೆ ಆಗಾಗ ಸಣ್ಣ ಪುಟ್ಟ ನೋವುಗಳಿಗೂ ಕೊರಗುತ್ತಿರುತ್ತಾರೆ. ಬುದ್ಧ ಹೇಳಿದ ಅತೀ ಮುಖ್ಯ ಮಾತು "ನೋವನ್ನ ಸ್ವೀಕರಿಸು" ಇವರಿಗದರ್ಥವಾಗಲೇ ಇಲ್ಲ. ಮತ್ತೆ ಮರುದಿನ ಅದೇ ಬುದ್ದನಿಗೆ ಹೂ ಇಟ್ಟು ದೀಪ ಬೆಳಗಿ ಕೈ ಮುಗಿಯುತ್ತಿದ್ದಾರೆ. ನಾವು ಕೂಡ ಅರ್ಥಮಾಡಿಕೊಳ್ಳಬೇಕಾದ ಮಾತುಗಳು ಮೌನದ ಒಳಗೆ ಅಡಗಿ ಕುಳಿತಿದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ