ಸ್ಟೇಟಸ್ ಕತೆಗಳು (ಭಾಗ ೫೯೬) - ಕವಿತೆ
ನನಗೆ ಅವತ್ತು ಸಿಕ್ಕಿದ್ದೆ ಆ ಕವಿತೆ. ಆ ಕವಿತೆಯನ್ನ ಓದಿದ ನಂತರ ಮತ್ತೆ ಮತ್ತೆ ಓದಬೇಕು ಅನ್ನೋದು ನನ್ನೊಳಗೆ ಸ್ಥಿರವಾಯಿತು. ಆ ದಿನದಿಂದ ನನಗೆ ಅಂತಹ ಕವಿತೆಗಳು ಹಲವಾರು ಕಡೆ ಸಿಕ್ಕವು. ಎಲ್ಲರ ಶೀರ್ಷಿಕೆ ಒಂದೇ ಆದರೆ ಒಳಗಿನ ವಿಚಾರಗಳು ಒಬ್ಬೊಬ್ಬರದು ಒಂದೊಂದು ತರಹ. ಈ ಕವಿತೆಯನ್ನ ಹಲವಾರು ಜನ ಬೇರೆ ಬೇರೆ ತರಹ ಬರೆದಿದ್ದಾರೆ, ಹೆಸರು ಒಂದೇ ಆದರೂ ಅವರವರ ವಿಚಾರಗಳು ಬಳಕೆಯ ಪ್ರಯೋಗಗಳು ಎಲ್ಲವೂ ವಿಭಿನ್ನ. ಅವತ್ತು ನನಗೆ ಅರ್ಥವಾಯಿತು ಈ ಹಸಿವಿನ ಕವಿತೆಗಳು ಉತ್ತರವನ್ನ ಹುಡುಕುತ್ತಿರುತ್ತವೇ ಅಂತ. ಹಾಗೆ ಪೂರ್ತಿಗೊಳಿಸುವ ಮಧ್ಯದಲ್ಲಿ ಒಂದಷ್ಟು ಹೊಸ ಕವಿತೆಗಳು ಹುಟ್ಟಿಕೊಳ್ಳುವುದಕ್ಕೂ ಸಾಧ್ಯ ಇದೆ ಇಲ್ಲಿ ಆಗಿರುವುದೇನು ಎಂದರೆ ಹೊಸ ಕವಿತೆ ಬರೆಯುವವರು ಬೇಡವಾಗಿದ್ದಾರೆ ಅದನ್ನ ಅಷ್ಟಾಗಿ ಯಾರು ಗಮನಿಸುತ್ತಾನೆ ಇಲ್ಲ. ಒಬ್ಬನಿಗೆ ಹೊಟ್ಟೆಯ ಹಸಿವು ,ಓದಿನ ಹಸಿವು, ಹಣ, ಆಸೆ, ಕಾಮ, ಪ್ರೀತಿ, ಬದುಕು ಎಲ್ಲದ್ದಕ್ಕೂ ಒಂದೇ ಉತ್ತರ ಸಿಗುತ್ತದೆ ಎಂದೇನು ಇಲ್ಲ. ಹಾಗಾಗಿ ಯಾರು ಈ ಕವಿತೆಯನ್ನು ಬರೆಯುತ್ತಾರೋ ಅವನಿಗೆ ಮಾತ್ರ ಬದುಕಿನಲ್ಲಿ ಅದ್ಭುತ ಅವಕಾಶಗಳು ಕಣ್ಣ ಮುಂದೆ ಇರುತ್ತವೆ. ಪ್ರತಿಯೊಬ್ಬರಿಗೂ ಈ ಕವಿತೆಯ ಸಾರ ಅರ್ಥವಾಗಬೇಕು. ಕವಿತೆ ಮನದಟ್ಟಾಗಬೇಕು. ಪ್ರತಿಯೊಬ್ಬರೂ ಈ ಹಸಿವಿನ ಕವಿತೆಯನ್ನ ದಿನವೂ ಕುಳಿತು ಬರೆಯುವಂತಾಗಬೇಕು. ಆ ಕವಿತೆಗೆ ಉತ್ತರವೂ ಸಿಗುವಂತಿರಬೇಕು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ