ಸ್ಟೇಟಸ್ ಕತೆಗಳು (ಭಾಗ ೫೯೮) - ಐಪಿಎಲ್

ಸ್ಟೇಟಸ್ ಕತೆಗಳು (ಭಾಗ ೫೯೮) - ಐಪಿಎಲ್

"ಅದೆಷ್ಟು ಅಂತ ಐಪಿಎಲ್ ನೋಡ್ತಿಯಾ? ನಿನಗೆ  ಮಾಡೋದಿಕ್ಕೆ ಬೇರೆ ಏನು ಕೆಲಸ ಇಲ್ವಾ? ಅದರಿಂದ ಬರೀ ಸಮಯ ವ್ಯರ್ಥ. ಜೀವನಕ್ಕೆ ಏನು ಸಿಗುತ್ತದೆ. ಒಂದಷ್ಟು ಅರ್ಥ ಮಾಡ್ಕೋ" 

"ಅಪ್ಪ ನೀನು ಜೀವನಕ್ಕೆ ಏನು ಸಿಗುತ್ತದೆ ಅಂತ ಕೇಳಬೇಡ, ನಿನಗೊಂದು ಕತೆ ಹೇಳ್ತೇನೆ" ತಂಡಕ್ಕೆ ಗೆಲ್ಲೋದಕ್ಕೆ ಕೊನೆಯ ಎಸೆತದಲ್ಲಿ 5 ರನ್ ಗಳ ಅವಶ್ಯಕತೆ ಇದೆ. ಬ್ಯಾಟಿಂಗ್ ಮಾಡುತ್ತಿದ್ದ ತಂಡ ಕೊನೆ ಎಸೆತದಲ್ಲಿ ಸಿಕ್ಸ್ ಹೊಡೆದರೆ  ಜಯಗಳಿಸುತ್ತೆ, ಬೌಂಡರಿ ಹೊಡೆದರೆ ಪಂದ್ಯ ಸಮ ಬಲವಾಗುತ್ತೆ. ಆದರೆ ಬೌಲಿಂಗ್ ಮಾಡುತ್ತಿದ್ದ ತಂಡ ಕೊನೆ ಎಸೆತವನ್ನು ನೋಬಲ್ ಹಾಕಿ ಬಿಡ್ತು ಇದರಿಂದ ಎದುರಾಳಿ ತಂಡಕ್ಕೆ ಒಂದು ರನ್ನಿನ ಜೊತೆಗೆ ಮತ್ತೊಂದು ಆ ಉಚಿತವಾದ ಎಸೆತ. ಅಲ್ಲಿ ಸಿಕ್ಸ್ ಹೊಡೆದು ತಂಡ ಗೆಲುವನ್ನು ಪಡೆದುಕೊಂಡಿತು. ಇದರಿಂದ ನನಗೆ ಏನು ಸಿಕ್ಕಿತು ಅಂತ ಅಂದ್ರೆ, ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದು ಅವಕಾಶ ಬರುತ್ತೆ. ಬೌಲಿಂಗ್ ಮಾಡುತ್ತಿದ್ದ ತಂಡ ಆ ಅವಕಾಶವನ್ನ ಸರಿಯಾಗಿ ಬಳಸಿಕೊಳ್ಳದ ಕಾರಣ ಅದರ ಅವಕಾಶ ಮುಂದಿನ ತಂಡಕ್ಕೆ ಹೋಯಿತು, ಬ್ಯಾಟಿಂಗ್ ಮಾಡುತ್ತಿದ್ದ ತಂಡ ಸೋತು ಕೈ ಚೆಲ್ಲಿದಾಗ ಸಿಕ್ಕ ಅವಕಾಶವನ್ನ ಬಳಸಿಕೊಂಡಿತು. ನಮ್ಮ ಸಮಯ ಬಂದೇ ಬರುತ್ತೆ ಕಾಯುವವರೆಗೂ ತಾಳ್ಮೆ ಬೇಕು. ಇದು ನನಗೆ ಅರ್ಥವಾಗಿರೋದು ಇವತ್ತು ನೋಡಿದ ಈ ಪಂದ್ಯದಿಂದ. ಅದಕ್ಕೆ ಪಂದ್ಯ ನೋಡ್ತಾ ಇರಬೇಕು ಹೊಸ ಹೊಸ ವಿಚಾರಗಳು ಅರ್ಥವಾಗ್ತದೆ  ಅಲ್ವಾ?" ಅಪ್ಪನಿಗೆ ಏನು ಹೇಳೋದು ಅಂತ  ಅರ್ಥವಾಗದೆ ಹೊರಗೆ ನಡೆದೇ ಬಿಟ್ಟರು

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ