ಸ್ಟೇಟಸ್ ಕತೆಗಳು (ಭಾಗ ೬೦೩) - ಖತೀಜಕ್ಕಾ

ಸ್ಟೇಟಸ್ ಕತೆಗಳು (ಭಾಗ ೬೦೩) - ಖತೀಜಕ್ಕಾ

ಮನೆಯ ಅಂದವನ್ನು ಹೆಚ್ಚಿಸುವುದಕ್ಕೆ ಹಸೆ ಚಿತ್ರಗಳನ್ನು ಬಿಡಿಸುತ್ತಾರೆ. ಈ ಹಸೆ ಚಿತ್ರ ಮನೆಯ ಅಂದವನ್ನು ಇನ್ನೂ ಇಮ್ಮಡಿಗೊಳಿಸುತ್ತದೆ. ನೋಡುಗರಿಗೆ ಅದೊಂದು ಸೌಂದರ್ಯದ ಧಾಮವಾಗಿ ಕಾಣುತ್ತೆ. ಆ ಊರಲ್ಲಿ ಖತೀಜಕ್ಕನಿಗೆ ಬಿಟ್ಟರೆ ಇನ್ಯಾರಿಗೂ ಈ ಕೆಲಸ ಮಾಡುವುದಕ್ಕೆ ಬರುವುದಿಲ್ಲ. ಹೆಚ್ಚಿನ ಮನೆಯವರು ಅವರ ಮನೆ ಕೆಲಸದ ಸಂದರ್ಭದಲ್ಲಿ ಖತಿಜಕ್ಕನನ್ನ ಕರೆದು ಹಸೆ ಚಿತ್ರ ಬಿಡಿಸುವುದಕ್ಕೆ ಕೇಳಿಕೊಳ್ಳುತ್ತಾರೆ. ರಾತ್ರಿ ಹಗಲು ಅಂತಿಲ್ಲ ಆ ಕೆಲಸವನ್ನು ತುಂಬಾ ಪ್ರೀತಿಯಿಂದ ಮುಗಿಸಿಕೊಡುತ್ತಾರೆ. ಕೆಲವೊಂದು ಸಲ ಆ ಕೆಲಸ ಇಲ್ಲದಿದ್ದಾಗ ತನ್ನ ಗಂಡನ ಜೊತೆ ಮನೆ ಕಟ್ಟುವ ಕೆಲಸಕ್ಕೆ ಗಾರೆ ಸಿಮೆಂಟ್ ಹೊರುವುದಕ್ಕೂ ಹೋಗುತ್ತಾರೆ. ಇದೇ ಕೆಲಸವನ್ನ ಹಲವಾರು ವರ್ಷಗಳಿಂದ ಮಾಡ್ತಾ ಬರ್ತಾ ಇದ್ರು. ಸ್ವಂತದ್ದು ಒಂದು ಮನೆ ಕಟ್ಟುವ ಯೋಚನೆ ಕೂಡ ಇವರಿಗೆ ಮಾಡೋದಕ್ಕೆ ಸಾಧ್ಯ ಆಗ್ಲಿಲ್ಲ. ಅಲ್ಲದೆ ಇವರ ಬೀಳುತ್ತಿರುವ ಮನೆ ಬಿರುಕು ಬಿಟ್ಟಿರುವ ಗೋಡೆಗಳಿಗೆ ಪ್ರತಿದಿನವೂ ಮಣ್ಣನ್ನು ಕಲಸಿ ಬಿರುಕುಗಳನ್ನ ಮುಚ್ಚುತ್ತಿದ್ದಾರೆ. ಮನಸ್ಸಿನೊಳಗೆ ಒಂದಷ್ಟು ಕಂಪನವೇರ್ಪಟ್ಟು ಕನಸುಗಳೇ ಹುಟ್ಟೋದಕ್ಕೆ ಸಾಧ್ಯವಾಗದಿರುವಂತಹ ಪರಿಸ್ಥಿತಿ ಇರುವಾಗ ಮನೆ ಬದುಕಿನ ಬಗ್ಗೆ ಕನಸಿಲ್ಲಿಯದು... ಇಂದೂ ಕೂಡಾ ಇನ್ಯಾರದೋ ಮನೆಯನ್ನ ಅಂದಗೊಳಿಸುವುದಕ್ಕೆ ಹೊರಟಿದ್ದಾರೆ ಖತೀಜಕ್ಕಾ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ