ಸ್ಟೇಟಸ್ ಕತೆಗಳು (ಭಾಗ ೬೦೪) - ಅಪ್ಪ

ಸ್ಟೇಟಸ್ ಕತೆಗಳು (ಭಾಗ ೬೦೪) - ಅಪ್ಪ

ನಮ್ಮ ಮನೆಯ ಯಜಮಾನ ನಮ್ಮಪ್ಪ. ಅವರಿಗೆ ಮನೆಯಲ್ಲಿ ವಿಪರೀತ ಗೌರವ. ಮನೆಯಲ್ಲಿ ಅಂತಲ್ಲ ಯಾವುದಾದರೂ ಕಾರ್ಯಕ್ರಮಗಳಿಗೆ ಹೋದರು ಅಲ್ಲಿ ಕೂಡ ಆತನನ್ನ ವಿಶೇಷವಾಗಿ ಗೌರವಿಸ್ತಾರೆ. ಹೀಗೆ ಊರಿನಲ್ಲಿ ಮತ್ತು ಮನೆಯಲ್ಲಿ ರಾಜನಂತೆ ಮೆರೆಯುತ್ತಿರುವ ಅಪ್ಪ ಬದುಕಿನ ಅನಿವಾರ್ಯತೆಗೋಸ್ಕರ ಹೊಸ ಕನಸುಗಳಿಗೆ ಇನ್ನೊಂದಷ್ಟು ಬಟ್ಟೆಗಳನ್ನ ತೊಡಿಸಿ ಪ್ರೀತಿಸುವುದಕ್ಕೋಸ್ಕರ ಕೆಲಸದ ಕಡೆಗೆ ಹೋಗುತ್ತಾನೆ. ಅಲ್ಲಿ ಆಳಾಗಿ ದುಡಿತಾನೆ. ಒಂದು ದಿನವೂ ಮನೆಯಲ್ಲಿ ಸಿಗಬೇಕಾದ ಗೌರವ ಹೊರಗೆ ಸಿಕ್ತಾ ಇಲ್ವಲ್ಲ ಅಂತ ಯೋಚನೆ ಕೂಡ ಮಾಡ್ತಾ ಇಲ್ಲ.  ಆತನಿಗೆ ಗೊತ್ತಿದೆ ತಾನು ಯಾರದೋ ಮನೆಯಲ್ಲಿ ಆಳಾಗಿ ದುಡಿಯದೇ ಹೋದರೆ ಮಗ ಗೋಡೆ ತುಂಬಾ ಬಿಡಿಸಿರುವ ಕನಸುಗಳೆಲ್ಲವೂ ಹಾಗೆಯೇ ಚಿತ್ರದ ಒಳಗೆ ಸೇರಿ ಹೋಗುತ್ತವೆ, ಮಗಳ ಬದುಕಿನ ಚಿತ್ರ ಬಣ್ಣಗಳಿಂದ ತುಂಬೋದಿಲ್ಲ. ಇದು ನನ್ನಪ್ಪನ‌ ಕತೆಯಲ್ಲ, ಹೆಚ್ಚಿನ ಎಲ್ಲಾ  ಅಪ್ಪಂದಿರ ಕತೆನೂ ಹೀಗೇನೇ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ