ಸ್ಟೇಟಸ್ ಕತೆಗಳು (ಭಾಗ ೬೧೦) - ವಿಪರ್ಯಾಸ

ಸ್ಟೇಟಸ್ ಕತೆಗಳು (ಭಾಗ ೬೧೦) - ವಿಪರ್ಯಾಸ

ಮನೆಯೊಲ್ಲಿಂದಿಷ್ಟು ಸಂಭ್ರಮದ ವಾತಾವರಣ. ಮನೆ ಮಗಳಿಗೆ ಮದುವೆ ನಿಶ್ಚಯವಾಗಿದೆ. ಪರಿಚಯದ ಹುಡುಗ ಹಲವರ ಬಳಿ‌ ಕೇಳಿ ವಿಚಾರಿಸಿ ಗೊತ್ತು ಮಾಡಿದವ. ಮಗಳ ವಯಸ್ಸಿಗಿಂತ ಎರಡು ವರ್ಷ ದೊಡ್ಡವ. ಆತನ ಕೆಲಸ, ಗುಣ , ವ್ಯಕ್ತಿತ್ವ, ಎಲ್ಲವನ್ನು ಅಳೆದು ತೂಗಿ ಗೊತ್ತು ಮಾಡಿದ್ದು. ಯಾಕೆಂದರೆ ಮನೆ ಮಗಳಲ್ಲವೆ, ಅಲ್ಲಿ ಬದುಕಬೇಕಾದ್ದು ಅವಳಲ್ಲವೇ.... ಇಷ್ಟೆಲ್ಲಾ ಯೋಚನೆ ಮಗಳ ಬಗ್ಗೆ ಇದೆ.

ಇದೇ ವರ್ಷದ ಹಿಂದೆ ತನ್ನ ಅಕ್ಕನ‌ ಮಗಳಿಗೊಂದು‌ ಮದುವೆಯಾಗಬೇಕಿತ್ತು. ಗಂಡು ಹುಡುಕುವುದ್ದಕ್ಕೆ ಆರಂಭ ಮಾಡಿದ್ದು ಇದೇ ಮನೆಯವರು. ಯಾಕೆಂದರೆ ಅಕ್ಕನ ಮಗಳ ಜವಾಬ್ದಾರಿ ಇವರ ತಲೆಯ ಮೇಲಿತ್ತು. ಮದುವೆ ಮಾಡಿಸುವುದು ಮಾತ್ರ ಇವರ ತಲೆಯ ಮೇಲಿದ್ದ ಕಾರಣ ಮದುವೆ ಮಾಡಿಸಲೇ ಬೇಕಿತ್ತು. ಆಗ ಯೋಚಿಸಲೇ ಇಲ್ಲ, ಮನೆ ಹೇಗಿದೆ, ಹುಡುಗ ಹೇಗೆ, ವ್ಯಕ್ತಿತ್ವ, ಬದುಕಿನ ರೀತಿ, ವಯಸ್ಸು ಇದ್ಯಾವುದು ಯೋಚನೆ ಮಾಡಲೇ ಇಲ್ಲ. ಅಕ್ಕನ‌ ಮಗಳ ಅಭಿರುಚಿ, ಒಪ್ಪಿಗೆಯ ಕೇಳಲೇ ಇಲ್ಲ ಮದುವೆ ಮಾತ್ರ ಮಾಡಿಸುವುದು ಇವರ ಕೆಲಸ.. ಅವಳ ಬದುಕು ಹೇಗಿದೆ, ಕನಸುಗಳು  ಎಲ್ಲಿ ನಿಂತಿವೆ ಇದ್ಯಾವುದು ಈಗ ಅವರ ಗಮನದಲ್ಲಿ ಇಲ್ಲ… ಮಗಳ ಬದುಕಿನ ಬಗಿಗಿದ್ದ ಯೋಚನೆ   ಅಕ್ಕನ ಮಗಳ  ಮೇಲೆ ಇಲ್ಲದ್ದು ವಿಪರ್ಯಾಸ

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ