ಸ್ಟೇಟಸ್ ಕತೆಗಳು (ಭಾಗ ೬೧೧) - ನೆಲವಾಗು
ಅವತ್ತು ಬೆಳ್ಳಂ ಬೆಳಗ್ಗೆ ಅಪ್ಪ ಬೈಯೋದಕ್ಕೆ ಆರಂಭ ಮಾಡಿದ್ರು ಮೊದಲು ನೆಲವಾಗುವುದಕ್ಕೆ ಕಲಿಯೋ, ನೆಲವಾದರೆ ಬದುಕಿನಲ್ಲಿ ಎಲ್ಲವೂ ನಿನ್ನಿಂದ ಸಾಧ್ಯ, ಯಾರಿಗೂ ಕೂಡ ಅಷ್ಟು ಸುಲಭದಲ್ಲಿ ನೆಲವಾಗುವುದ್ದಕ್ಕೆ ಆಗೋದಿಲ್ಲ. ನೆಲವಾದವನು ಬದುಕಿನಲ್ಲಿ ಸೋಲುವುದಿಲ್ಲ "
"ಅಪ್ಪ, ಹೇಳುವಾಗ ಒಂದಷ್ಟು ಅರ್ಥ ಇರುವ ಮಾತುಗಳನ್ನು ಆಡಬೇಕು ಅದು ಬಿಟ್ಟು ಅರ್ಥವೇ ಇಲ್ಲದ ವ್ಯರ್ಥವಾದ ಮಾತುಗಳನ್ನು ಎಷ್ಟು ಅಂತ ಹೇಳ್ತೀರಾ " "ನೋಡು ಮಗ ನಿನಗೆ ಅದು ಅರ್ಥ ಆಗಿಲ್ಲ ಅಂತ ಅನ್ಸುತ್ತೆ, ನೆಲವಾಗುವುದು ಅಂದ್ರೆ ಅಷ್ಟು ಫಲವತ್ತಾಗೋದು. ಒಂದೇ ನೆಲದ ಮೇಲೆ ಎದ್ದು ನಿಂತ ಬೇರೆ ಬೇರೆ ತರಹದ ಹಣ್ಣಿನ ಗಿಡಗಳು, ವಿಧವಿಧ ರೀತಿಯ ಮರಗಳು, ಹೂವುಗಳು ಎಲ್ಲವೂ ಸತ್ವವನ್ನ ಹೀರಿಕೊಂಡು ಮೇಲೆದ್ದು ನಿಂತಿದೆ. ಒಂದೇ ನೆಲ ಇಷ್ಟೆಲ್ಲ ಸಾಧ್ಯತೆಗಳನ್ನ ಇಟ್ಟುಕೊಳ್ಳುವಾಗ ನಾವು ನಮ್ಮಲ್ಲಿ ಪ್ರಯತ್ನದ ಹೊಸ ಸಾಧ್ಯತೆಗಳನ್ನು ಅವಕಾಶ, ಹವ್ಯಾಸ, ಅಭ್ಯಾಸ, ಎಲ್ಲವನ್ನು ಇಟ್ಟುಕೊಳ್ಳುವುದಕ್ಕೇನು ದಾಡಿ, ಪ್ರಯತ್ನ ಮಾಡೋಣ ಪೂರ್ತಿ ಅಲ್ಲದಿದ್ದರೂ ಸ್ವಲ್ಪವಾದರೂ ಆಗಬಹುದು. ಒಮ್ಮೆ ನೆಲವಾಗೋಕೆ ಪ್ರಯತ್ನ ಪಡೋಣ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ