ಸ್ಟೇಟಸ್ ಕತೆಗಳು (ಭಾಗ ೬೧೫) - ಅಜ್ಜಾ
"ಅಮ್ಮ ಅಜ್ಜನಿಗೆ ಏನಾಗಿದೆ ಅಜ್ಜ ಯಾಕ್ ಮಾತಾಡ್ತಾ ಇಲ್ಲ"
" ಮಗು ಅಜ್ಜ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾರೆ"
" ಅವರು ಯಾಕಮ್ಮ ಇಷ್ಟು ಬೇಗ ಬಿಟ್ಟು ಹೋದರು, ನೀನು ಕೆಲಸಕ್ಕೆ ಹೋದಮೇಲೆ ನನ್ನ ಜೊತೆಗಿರೋದು ಅಜ್ಜಾ, ಶಾಲೆಯಲ್ಲಿ ಕೊಟ್ಟ ಪಾಠವನ್ನೆಲ್ಲಾ ಹೇಳಿಕೊಡುತ್ತಿದ್ದವರು, ಆ ಕೆಲಸ ಇನ್ನು ಮುಗಿದಿಲ್ಲ ಅಲ್ವಾ ಅದನ್ನೆಲ್ಲ ಬಿಟ್ಟು ಅರ್ಧದಲ್ಲಿ ಹೋದದ್ದು ಯಾಕೆ ತಪ್ಪಲ್ವಾ? ಅದಲ್ಲದೆ ನಾನೆಲ್ಲಾದ್ರೂ ಹೊರಗಡೆ ಹೋದಾಗ ಅಜ್ಜನಲ್ಲಿ ಹೇಳಿ ಹೋಗ್ತಾ ಇದ್ದೆ ಈ ಸಲ ಯಾಕೆ ಅಜ್ಜ ನನ್ನತ್ರ ಹೇಳಲೇ ಇಲ್ಲ? ಇದು ತಪ್ಪಲ್ವಾ? ಹೋಗುವಾಗ ಹೇಳಿ ಹೋಗಬೇಕು ಹಾಗಂತ ಅಜ್ಜನೇ ಹೇಳ್ತಾ ಇದ್ರು ,"
"ಇಲ್ಲ ಮಗು ಅಜ್ಜ ದೇವರ ಹತ್ರ ಹೋಗಿದ್ದಾರೆ ಅಲ್ಲಿಂದಲೇ ನಮ್ಮನ್ನು ನೋಡಿ ಆಶೀರ್ವಾದ ಮಾಡುತ್ತಾರೆ" "ಅದೆಲ್ಲ ಸರಿ ಹಾಗಾದರೆ ಅಜ್ಜನನ್ನ ಯಾಕೆ ನೀವೆಲ್ಲ ಸೇರಿ ಬೆಂಕಿಯಲ್ಲಿ ಹಾಕಿ ಸುಟ್ಟುಬಿಟ್ಟಿರಿ, ಅವರನ್ನು ಮಣ್ಣೊಳಗೆ ಹಾಕಿ ಇಡಬಹುದಿತ್ತಲ್ವಾ?"
" ಇಲ್ಲ ಮಗು ನಮ್ಮ ಸಂಸ್ಕೃತಿಯೇ ಹಾಗೆ "
"ಸುಡುವಾಗ ಅಜ್ಜನಿಗೆ ತುಂಬಾ ನೋವಾಗುತ್ತದೆ, ಆದರೂ ಅಮ್ಮ ಇನ್ನು ಮುಂದೆ ಅಜ್ಜನ ನನ್ನತ್ರ ಬರೋದೇ ಇಲ್ವಾ? ಏನ್ ಹೇಳಿ ಕೊಡೋದೇ ಇಲ್ವಾ? ಅದಕ್ಕೆ ತುಂಬಾ ನೋವಾಗ್ತಾ ಇದೆ. ಅಜ್ಜಾ ಇದು ನೀನು ಮೋಸ ಮಾಡಿದ್ದು ,ನನ್ನತ್ರ ಹೇಳದೆ ನಮ್ಮೆಲ್ಲರನ್ನ ಬಿಟ್ಟು ಅಷ್ಟು ದೂರ ಯಾಕೆ ಹೋದೆ ? ಮತ್ತೆ ನಿನ್ನ ಜೊತೆ ಇರಬೇಕು ನೀನು ಹೇಳೋ ಕಥೆ ಕೇಳಬೇಕು, ಕೈ ಹಿಡಿದು ದೂರ ನಡಿಬೇಕು, ಏನೆಲ್ಲಾ ಆಸೆ ಇದೆ ಗೊತ್ತಾ... ಅಜ್ಜಾ ಬಾ ಅಜ್ಜಾ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ