ಸ್ಟೇಟಸ್ ಕತೆಗಳು (ಭಾಗ ೬೧) - ಉತ್ತೀರ್ಣ

ಸ್ಟೇಟಸ್ ಕತೆಗಳು (ಭಾಗ ೬೧) - ಉತ್ತೀರ್ಣ

ಅಲ್ಲಿ ಘೋಷಣೆಯಾಗಿದೆ ."ಎಲ್ಲರನ್ನು ಮುಂದಿನ ಮೆಟ್ಟಿಲಿಗೆ ವರ್ಗಾಯಿಸಿ" ಶಾಲೆಯ ಅಧ್ಯಾಪಕರು ದಾಟಿಸಿದರು. ಈಗ ಶಿಕ್ಷಕರು ಮಾತನಾಡುತ್ತಿದ್ದಾರೆ "ಅಲ್ಲಾ ನೀವು ಹೇಳಿದ್ದಕ್ಕೆ ನಾವು ದಾಟಿಸಿದ್ದೇವೆ. ಹೀಗೆ ದಾಟಿದವರಲ್ಲಿ ಎಷ್ಟು ಜನ ಅಲ್ಲಿ ನಿಲ್ಲಲು ಅರ್ಹರಾಗಿದ್ದಾರೆ. ಮತ್ತೆ ಅದೇ ಮೆಟ್ಟಿಲಿನಲ್ಲಿ ನಿಂತಿರುತ್ತಾರೋ ಅಥವಾ ಮುಂದಿನ ಹೆಜ್ಜೆ ಇರುತ್ತಾರೋ, ಮುಂದಿನ ಹೆಜ್ಜೆಯನ್ನಿಡಲು ಯಾರಾದರೂ ಹೀಗೆ ದಾಟಿಸಬೇಕೋ, ಪುಸ್ತಕ ಅನ್ನೋದನ್ನ ರೂಪಿಸಿದವರು ಅಲ್ಲೊಂದಷ್ಟು ಮೌಲ್ಯ, ಮುಂದಿನ ಹೆಜ್ಜೆಗೆ ತಯಾರಿ, ಇತಿಹಾಸ ವಿಜ್ಞಾನಗಳನ್ನು ತಿಳಿದುಕೊಳ್ಳಬೇಕೆಂದು ರೂಪಿಸಿದ್ದರು. ಆದರೆ ಅದನ್ನು ಸರಿಯಾಗಿ ಪಡೆದುಕೊಳ್ಳದೆ ನೇರವಾಗಿ ದೂಡಿ ಬಿಟ್ಟರೆ ಮುಂದೆ ಕಷ್ಟವನ್ನ ಎದುರಿಸಬೇಕಾದವನು ವಿದ್ಯಾರ್ಥಿ, ಸರಪಳಿಯಲ್ಲಿ ಒಂದು ಕೊಂಡಿ ಕಳಚಿದಂತಾಯಿತು, ಇದನ್ನ ಮತ್ತೆ ಜೋಡಿಸಿ ಗಟ್ಟಿಯಾಗಿರುವುದು ಮುಂದಿನ ಹಂತದ ಕೆಲಸವಾಗುತ್ತದೆ. ಒಟ್ಟಿನಲ್ಲಿ ಕೆಳಗಿನ ಮೆಟ್ಟಿನಿಂದ ಮೇಲೇರಿದವನು ಒಂದಷ್ಟನ್ನು ಕಳೆದುಕೊಂಡು ಅಲ್ಲಿಗೆ ತಲುಪಿದ್ದಾನೆ. ಅವೆಲ್ಲವು ಮರಳಿ ಸಿಗುವುದು ಹೇಗೆ ಉತ್ತರಿಸುವವರಿಲ್ಲ "

ಮತ್ತೆ ಘೋಷಣೆಯಾಯಿತು "ಪರೀಕ್ಷೆ ಮಾಡಿ " ಬೇರಿಳಿಸದ ಮರವು ಹೇಗೆ ಧೀರ್ಘ ಕಾಲ ಬಾಳುವುದು…

-ಧೀರಜ್ ಬೆಳ್ಳಾರೆ 

ಚಿತ್ರ ಕೃಪೆ: ಇಂಟರ್ನೆಟ್ ತಾಣ