ಸ್ಟೇಟಸ್ ಕತೆಗಳು (ಭಾಗ ೬೨೩) - ಅನಾಥ ಭಾವ

ಜೀವನದಲ್ಲಿ ತುಂಬಾ ಭೀಕರವಾಗಿರುವುದು ಯಾವುದು ಅಂತ ಇದ್ದೂ ಇಲ್ಲದಂತಿರೋದು. ಬದುಕು ಎಲ್ಲರನ್ನು ಬದುಕಿಸುವುದಕ್ಕೆ ಕಾಯ್ತಾ ಇರುತ್ತೆ. ಕೆಲವರು ಬದುಕುತ್ತಾರೆ ಕೆಲವರು ಕಳೆದುಕೊಳ್ಳುತ್ತಾರೆ. ಇನ್ನು ಕೆಲವರು ಬದುಕೋಕ್ಕಾಗದೆ ನರಳುತ್ತಾರೆ. ಆ ನರಳುವಿಕೆಯ ನಡುವಿನ ಒಂದೆರಡು ಜೀವಗಳ ಮಾತುಕತೆಗಳನ್ನ ನಿಮ್ಮ ಮುಂದೆ ಇಡೋದಕ್ಕೆ ಈ ಪ್ರಯತ್ನ.
ಮಗ ತುಂಬಾ ದೊಡ್ಡ ಕೆಲಸ, ನಮ್ಮೂರು ದಾವಣಗೆರೆ, ಅವನಿಗೆ ಕೆಲಸ ಕುಟುಂಬದ ನಡುವೆ ನನ್ನನ್ನ ನೋಡೋದ್ದಕ್ಕೆ ಆಗ್ತಾ ಇಲ್ವಂತೆ. ನಮ್ಮದು ತಮಿಳುನಾಡು ಅನಾಥಾಶ್ರಮಕ್ಕೆ ಬಿಟ್ಟು ತಿಂಗಳು ನಾಲ್ಕು ಆದರೂ ಸುದ್ದಿ ಇಲ್ಲ. ನನ್ನ ಮೊಮ್ಮಗನನ್ನು ನೋಡದೇ 5 ವರ್ಷಗಳಾಯಿತು. ಆತ ಈ ವರ್ಷ ಶಾಲೆಗೆ ಸೇರಬಹುದು ಆತ ಹೇಗಿದ್ದಾನೆ ಅನ್ನೋದನ್ನ ನೋಡುವುದಕ್ಕೆ ಅವಕಾಶವೇ ಇಲ್ಲ. ಮನೆಯವರು ಇಲ್ಲಿಗೆ ಆತನನ್ನು ಕರೆದುಕೊಂಡು ಬರುವುದಿಲ್ಲ ಅವರು ಯಾರು ಬಂದಿಲ್ಲ. ನನ್ನನ್ನ ಅವರ ಮನೆಗೆ ಕರೆದುಕೊಂಡು ಹೋಗುವುದು ಇಲ್ಲ,
ಇನ್ನೆರಡು ದಿನದಲ್ಲಿ ಮಗ ಬರ್ತೇನೆ ಅಂತ ಹೇಳಿದ್ದಾನೆ ವರ್ಷ ಎರಡು ಆದ್ರೂ ಇತ್ತ ಕಡೆಗೆ ಪತ್ತೆ ಇಲ್ಲ. ಕಾಟಾಚಾರಕ್ಕಾದ್ರೂ ಮಾತುಕತೆಗಳಿಲ್ಲ. ಯಾರ್ಯಾರು ಶಾಲೆಯ ಮಕ್ಕಳು ಒಂದಷ್ಟು ಒಳ್ಳೆಯ ಮನಸ್ಸಿರುವವರು ಆಗಾಗ ಇಲ್ಲಿಗೆ ಬಂದು ನಮ್ಮೊಂದಿಗೆ ಮಾತನಾಡುತ್ತಾ ನಮಗೆ ಅಗತ್ಯವಾಗಿರುವುದನ್ನು ನೀಡುತ್ತಾ ಒಂದಷ್ಟು ಪ್ರೀತಿಯನ್ನು ಹಂಚಿ ಹೋಗುತ್ತಾರೆ ಆ ಪ್ರೀತಿಯೊಂದಿಗೆ ಒಂದಷ್ಟು ಹೆಚ್ಚು ದಿನ ಬದುಕುವುದನ್ನು ಪ್ರಯತ್ನ ಮಾಡ್ತಾ ಇರುತ್ತವೆ. ಈ ದಿನವೂ ಬದುಕುವ ಆಸೆ ಒಂದು ಕ್ಷಣ ಮೂಡಿದರೆ, ಇನ್ನೊಂದು ಕ್ಷಣ ಮಾಯವಾಗಿ ಬಿಡುತ್ತೆ... ಯಾರು ಇಲ್ಲದೆ ಒಬ್ಬಂಟಿಯಾಗಿ ಆ ಸೋಫದ ಮೇಲೆ ಕುಳಿತು ಖಾಲಿ ಭಾವ ನನ್ನ ಸೃಷ್ಟಿಸುವಾಗ ಖಾಲಿಯಾದ ಜಗತ್ತಿನ ನಡುವೆ ತಾವು ಖಾಲಿಯಾಗಿ ಬಿಟ್ಟರೆ ಹೇಗೆ? ಎಲ್ಲ ಯೋಚನೆಗಳನ್ನು ಇಟ್ಟುಕೊಂಡು ಮತ್ತೆ ಎದುರು ನೋಡುತ್ತೇವೆ. ಇನ್ಯಾರಾದರೂ ನಮ್ಮನ್ನ ಮಾತನಾಡಿಸುವುದಕ್ಕೆ ಬರ್ತಾರ ಅಂತ… ಬದುಕುವುದ್ದಕ್ಕೆ ನಮಗೂ ಆಸೆ
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ