ಸ್ಟೇಟಸ್ ಕತೆಗಳು (ಭಾಗ ೬೨೫) - ಬದಲಾವಣೆ

ಸ್ಟೇಟಸ್ ಕತೆಗಳು (ಭಾಗ ೬೨೫) - ಬದಲಾವಣೆ

ಮನೆಯಲ್ಲಿ ಅಂತಹ ಬದಲಾವಣೆಗಳು ಏನು ಆಗಿಲ್ಲ. ಆದರೆ ಪ್ರತಿದಿನ ಅಮ್ಮ ಕರೀತಾ ಇದ್ರು, ಮಗಳೇ ಊಟ ಮಾಡಿದ್ಯಾ? ಮಗಳೇ ಆ ಬಟ್ಟೆ ಕೆಳಗೆ ಹಾಕು, ಮಗಳೇ ಜಾಗ್ರತೆ, ಮಗಳೇ ಇವತ್ತು ಹಾಡು ಅಭ್ಯಾಸ ಮಾಡಬೇಕು, ಈ ಪ್ರಶ್ನೆಗಳೆಲ್ಲವೂ ಇನ್ನು ಮುಂದೆ ಹಾಗೆ ಉಳಿಯುತ್ತವೆ ಈ ಮನೆಯಲ್ಲಿ ಯಾಕೆಂದರೆ ಮಗಳು ಮನೆಯೊಂದರ ಬೆಳಕುಗಳೊಂದಿಗೆ ಹೊರ ಹೋಗಿದ್ದಾಳೆ. ಮನೆ ಹಾಗೆ ಇರುತ್ತೆ ಪ್ರತಿದಿನವೂ ಹಾಗೆ ಮುಂದುವರೆಯುತ್ತದೆ. ಆದರೆ ಮಗಳ ಜೊತೆಗೆ ನಡೆಯುತ್ತಿದ್ದ ಸಂವಹನಗಳು ಅವಳೊಂದಿಗೆಗಿನ ಒಡನಾಟ ಕಡಿಮೆಯಾಗುತ್ತದೆ. ಇದು ಪ್ರತಿಯೊಂದು ಮನೆಯೂ ಅನುಭವಿಸುವ ಸಂತಸ ನೋವು ಆಗಿರಬಹುದು. ಆ ಮನೆಯಲ್ಲಿ ಸದ್ಯಕ್ಕೀಗ ಮಾಡಿದ ಖರ್ಚುಗಳ ಲೆಕ್ಕ ನಡೆಯುತ್ತಿದೆ. ತೀರಿಸಬೇಕಾದ ಯೋಜನೆ ಮುಂದುವರೆಯುತ್ತಿದೆ. ಭವಿಷ್ಯದ ಬಗ್ಗೆ ಕನಸುಗಳು ಹೆಚ್ಚಾಗುತ್ತಿದ್ದಾವೆ. ಬದುಕುವ ರೀತಿಗಳು ಒಂದಷ್ಟು ಬದಲಾಗಲಿದ್ದಾವೆ. ಕನಸುಗಳು ನೆರವೇರಿದ್ದಕ್ಕೆ ನೆಮ್ಮದಿ ನೆಲೆಸಿದೆ, ಒಟ್ಟಿನಲ್ಲಿ ಬದುಕು ಬದಲಾಗಲಿದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ