ಸ್ಟೇಟಸ್ ಕತೆಗಳು (ಭಾಗ ೬೨೮) - ಆಕೆ

ಬದುಕನ್ನು ಹಾಗೆ ಸಾಗಿಸುತ್ತಿದ್ದವಳಿಗೆ ಜವಾಬ್ದಾರಿ ಅರ್ಥವಾಗುವುದಕ್ಕೆ ಒಂದಷ್ಟು ಸಮಯ ಹಿಡಿಯಿತು. ಮದುವೆ ನಿಶ್ಚಯವಾಯಿತು ಅದರ ಕಾರ್ಯಕ್ರಮವನ್ನು ಮನೆವರೆಲ್ಲರೂ ಸೇರಿ ಅದ್ಬುತವಾಗಿ ನಡೆಸಿಕೊಟ್ಟರು. ಎಲ್ಲಾ ಕಾರ್ಯ ಕ್ರಮಗಳು ಮುಗಿದು ಅವರವರು ಅವರವರ ಮನೆಗೆ ತೆರಳಿದರು. ಈಗ ಮನೆಯನ್ನು ನಿಭಾಯಿಸುವ ಜವಾಬ್ದಾರಿಯ ಅವಳದ್ದು, ಮನೆಯಲ್ಲಿ ಹಿರಿಯರು ಅಂತ ಬೇರೆ ಯಾರು ಇಲ್ಲ .ಅವಳು, ಅವಳ ಗಂಡ ಮತ್ತು ತಂಗಿ ಮೂರು ಜನರ ಸಂಸಾರ. ಪ್ರತಿಯೊಂದನ್ನು ಯೋಜಿಸಿ ಯೋಚಿಸಿ ನಿರ್ಧರಿಸಬೇಕು.ಬದುಕಿನ ದಾರಿ ತುಂಬ ದೊಡ್ಡದಿದೆ. ಮುಂದಿನ ಭವಿಷ್ಯದ ಬಗ್ಗೆ ಒಂದಷ್ಟು ಯೋಚನೆಗಳನ್ನು ಕೂತು ನಿರ್ಧರಿಸಬೇಕು. ದಾರಿಯಲ್ಲಿ ಎದುರಾಗುವ ಅಡೆತಡೆಗಳನ್ನು ಒಂದಷ್ಟು ನಿರ್ಧಾರ ಮಾಡಿಟ್ಟುಕೊಂಡಿರಬೇಕು. ಅವೆಲ್ಲವನ್ನು ನಿಭಾಯಿಸುವುದಕ್ಕೆ ದಾರಿಗಳು ಯಾವುದು ಅನ್ನೋದನ್ನ ತಿಳಿದುಕೊಳ್ಳಬೇಕು. ಬದುಕು ಹಸನಾಗುವುದಕ್ಕೆ ದಾರಿಗಳನ್ನು ಹುಡುಕಬೇಕು, ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸಲು ಅನುಭವ ಬೇಕು ಅಂತ ಏನು ಇಲ್ಲ, ಆದರೆ ಧೈರ್ಯ ತಾಳ್ಮೆ ಇದ್ದರೆ ಜೀವನವೇ ಎಲ್ಲಾ ಅನುಭವಗಳನ್ನು ಕಲಿಸುತ್ತಾ ಹೋಗುತ್ತದೆ. ಅಲ್ಲಿ ಅವಳು ವಿದ್ಯಾರ್ಥಿಯಾಗಿರಬೇಕು. ಪ್ರತಿಯೊಂದು ಕಲಿಯುವ ಕೇಳುವ ಮನಸ್ಥಿತಿ ಇರಬೇಕು .ಅವಳಿಗೆ ಜೀವನದ ಹೊಸ ಮನ್ವಂತರದ ದಾರಿ ಗೊತ್ತಾಗಿದೆ ಅಲ್ಲಿ ಎಲ್ಲರನ್ನ ಜೊತೆ ಸೇರಿಸಿಕೊಂಡು ಸಾಗುವ ಸ್ಪಷ್ಟ ನಿರ್ಧಾರದೊಂದಿಗೆ ಆಕೆ ಹೆಜ್ಜೆ ಇಟ್ಟಿದ್ದಾಳೆ. ಮನೆ ಬೆಳಗಬೇಕು, ಮನವರಳಬೇಕು, ಭಾಂದವ್ಯಗಳು ಇನ್ನು ಗಟ್ಟಿಗೊಳಬೇಕು. ಎಲ್ಲಾ ದೃಢ ನಿಶ್ಚಯದೊಂದಿಗೆ ಆಕೆ ತನ್ನ ದೈನಂದಿನ ಕೆಲಸಗಳ ಕಡೆಗೆ ಸಾಗಿದ್ದಾಳೆ....
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ