ಸ್ಟೇಟಸ್ ಕತೆಗಳು (ಭಾಗ ೬೩೬) - ದೈನ್ಯತೆ

ಸ್ಟೇಟಸ್ ಕತೆಗಳು (ಭಾಗ ೬೩೬) - ದೈನ್ಯತೆ

ಆ ದೇಹಕ್ಕೊಂದು ಊರುಗೋಲು ಬೇಕು. ಇಲ್ಲವಾದರೆ ಒಂದು ಹೆಜ್ಜೆಯಿಂದ ಇನ್ನೊಂದು ಹೆಜ್ಜೆಯನ್ನಿಡಲು ಪಾದ ಸಹಕರಿಸುವುದಿಲ್ಲ. ಕಣ್ಣೀರು ಪ್ರತಿದಿನವೂ ಇಳಿಯುತ್ತಿದೆ. ಹೊಟ್ಟೆಯೊಳಗಿನ ಹಸಿವು ಮತ್ತೆ ಮತ್ತೆ ಬಡಿದೆಬ್ಬಿಸಿ ಹೇಳುತ್ತಿದೆ ದಿನ ನಾಲ್ಕು ಆಯ್ತು ಹೊಟ್ಟೆಯೊಳಗೆ ನೀರು ಬಿಟ್ಟು ಬೇರೇನು ಸೇರಿಲ್ಲ ಎಂದು. ಎತ್ತ ಕಡೆ ನೋಡಿದರೂ ಹೊಟ್ಟೆಯೊಳಗೆ ಆಹಾರ ಇಳಿಸುವುದಕ್ಕೆ ಯಾವ ಅವಕಾಶವೂ ಸಿಗುತ್ತಿಲ್ಲ. ದೇಹ ಬಾಗುತ್ತಿದೆ ಎದುರಿಗೆ ಸಿಕ್ಕ ಎಲ್ಲರ ಬಳಿ ಕೈಯೆತ್ತಿ ಬೇಡಿದರೂ ಅಲ್ಲಿಯೂ ಏನು ಸಿಗದಿದ್ದಾಗ ಎಲ್ಲರ ಕಾಲಿಗೆ ಬಿದ್ದು ಧೈನ್ಯತೆಯಿಂದ ಕಣ್ಣೀರು ಇಳಿಸಿದರು. ಇವರ ವಯಸ್ಸು 90 ದಾಟಿರಬಹುದು ಆದರೆ ಹಸಿವನ್ನ ತಣಿಸುವುದಕ್ಕೆ ಕಾಲಿಗೆ ಬಿದ್ದ ಜೀವಗಳಿಗೆ 10, 20, 30 ಗೊತ್ತಿಲ್ಲ. ಆದರೆ ಇವರ ಮನೆಯರಿಂದಲೇ ಇವರು ಬಂದವರ ಕಾಲಿಗೆ ಬಿದ್ದು ಬೇಡುವ ಪರಿಸ್ಥಿತಿ ನಿರ್ಮಾಣವಾಗಿರೋದು. ಮನೆಯವರು  ಇವರಿಂದ ಎಲ್ಲವನ್ನ ಪಡೆದುಕೊಂಡು ಹಾಗೆ ಹೊರತಳ್ಳಿದ್ದಾರೆ. ಈ ಜೀವ ತನ್ನ ಹೊಟ್ಟೆಯ ಹಸಿವು ಕರಗಿಸೋಕೆ ಸಣ್ಣವರು, ದೊಡ್ಡವರು ಎನ್ನದೆ ಎಲ್ಲರ ಕಾಲಿಗೆ ಬಿದ್ದು ಬೇಡುತ್ತಿದೆ. ಅವರಿಗೆ ಮೊದಲೇ ಗೊತ್ತಿದ್ದರೆ ಈಗ ಎದೆಯುಬ್ಬಿಸಿ ನಡೆಯುತ್ತಿದ್ದಾರಲ್ಲ ಇವರ ಮಕ್ಕಳು, ಅವರ್ಯಾರಿಗೂ ಶಿಕ್ಷಣವನ್ನೇ ನೀಡದೇ ಬೆನ್ನು ಬಗ್ಗಿಸಿ ದುಡಿಯೋದಕ್ಕೆ ಕಳುಹಿಸುತ್ತಿದ್ದರೂ ಏನೋ....

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ