ಸ್ಟೇಟಸ್ ಕತೆಗಳು (ಭಾಗ ೬೩೭) - ಮಾತು

ಸ್ಟೇಟಸ್ ಕತೆಗಳು (ಭಾಗ ೬೩೭) - ಮಾತು

ಬದುಕಿನಲ್ಲಿ ಎಲ್ಲವೂ ಒಂದೇ ತೆರನಾಗಿರುವುದಿಲ್ಲ ಪ್ರತಿಯೊಂದು ಕಾಲಕಾಲಕ್ಕೆ ಸನ್ನಿವೇಶಕ್ಕೆ ತಕ್ಕಂತೆ ಬದಲಾಗುತ್ತಾ ಹೋಗುತ್ತಾ ಇರುತ್ತೆ ನಾವು ಕಾಲಕ್ಕೆ ಕಾಲಕ್ಕೆ  ಬದಲಾಗುವುದನ್ನ ರೂಡಿಸಿಕೊಳ್ಳುವುದರ ಜೊತೆಗೆ ಒಂದಷ್ಟು ಸ್ವಂತ ವ್ಯಕ್ತಿತ್ವವನ್ನು ಅಳವಡಿಸಿಕೊಂಡಿರಬೇಕು ,ಇಷ್ಟೆಲ್ಲಾ ಅವತ್ತು ಮನೆ ಮುಂದೆ ಸೇರಿದ ಸಭೆಯಲ್ಲಿ ದೊಡ್ಡವರು ಯಾರು ಮಾತನಾಡುತ್ತಿದ್ದರು. ನನಗೆ ಅವರ ಮಾತನ್ನು ಒಪ್ಪಿಕೊಳ್ಳುವುದೋ ಬೇಡವೋ ಅಂತ ಅರ್ಥ ಆಗ್ಲಿಲ್ಲ. ಏನು ಮಾಡೋದು ಅಂತ ಗೊತ್ತಾಗದೆ ಅಪ್ಪನಲ್ಲಿ ಪ್ರಶ್ನೆ ಕೇಳಿದ್ದಕ್ಕೆ ಅಪ್ಪ ಕೊಟ್ಟ ಉತ್ತರ ಹೀಗಿತ್ತು, " ನೋಡು ನೀನು ಸಮಾಜದಲ್ಲಿ ಹೆಸರು ಗಳಿಸಬೇಕು ಅನ್ನೋದೇ ಸದ್ಯದ ಪರಿಸ್ಥಿತಿಗೆ ತುಂಬಾ ಮುಖ್ಯವಾದ ವಿಚಾರ, ಯಾಕೆ ಅಂತ ಅಂದ್ರೆ ನೀನು ಹೇಳುವ ವಿಚಾರ ಎಷ್ಟೇ ಅದ್ಬುತವಾಗಿದ್ದರು ನೀನು ಓದಿದವನಲ್ಲ ಅಂತಾದರೆ ನಿನ್ನನ್ನ ಯಾರೂ ಗಮನಿಸುವುದಿಲ್ಲ ಅಲ್ಲದೆ ಸಾಧಿಸಿದವನು ಹೇಳುವ ಪ್ರತೀ ಮಾತಿಗೂ ಇಲ್ಲಿ ಮೌಲ್ಯವಿದೆ, ಎಲ್ಲರಿಗೂ ತಿಳಿದಿರುವ ವಿಚಾರ ಹೇಳಿದರೂ ಜನ ಚಪ್ಪಾಳೆ ಹೊಡಿತಾರೆ, ಜೊತೆಗೆ ನಿನ್ನ ಮಾತುಗಳು ಅರ್ಥವಿಲ್ಲದ್ದು ವ್ಯರ್ಥವಿಲ್ಲದ್ದು ಆದರೂ ತುಂಬಾ ಮುತುವರ್ಜಿಯಿಂದ ಕೇಳುತ್ತಾರೆ. ನೀನೂ ಏನೂ ಮಾಡದೆ ಅದ್ಭುತವಾದ ವಿಚಾರ ಹೇಳಿದರೂ ಇಲ್ಲಿ ಒಪ್ಪಿಕೊಳ್ಳುವವರಿಲ್ಲ. ಇದು ಜಗತ್ತಿನ ವ್ಯತ್ಯಾಸ ಜಗತ್ತು ನಮ್ಮನ್ನ ಕೆಲಸ ಮತ್ತು ವ್ಯಕ್ತಿತ್ವದಿಂದಲೇ ಅಳೆಯುತ್ತದೆ . ಹಾಗಾಗಿ ನಿನ್ನ ಮಾತಿಗೆ ಮೌಲ್ಯ ಸಿಗಬೇಕು ಅಂತಾದರೆ ನೀನು ಸಾಧಿಸಬೇಕು ಬೇರೆ ದಾರಿ ಯಾವುದು ಇಲ್ಲ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ