ಸ್ಟೇಟಸ್ ಕತೆಗಳು (ಭಾಗ ೬೪೧) - ಬದುಕು

ಸ್ಟೇಟಸ್ ಕತೆಗಳು (ಭಾಗ ೬೪೧) - ಬದುಕು

ಈ ಬದುಕು ಯಾಕೆ ವಿಚಿತ್ರ ಅಂತ ಅನಿಸುವುದಕ್ಕೆ ಪ್ರಾರಂಭ ಆಗುತ್ತೆ ಅನ್ನೋ ಪ್ರಶ್ನೆಯನ್ನ ಅವತ್ತು ನನ್ನಲ್ಲಿ ಕೇಳಿಯೇ ಬಿಟ್ಟರು. ನಾನು ಅಲ್ಲಿ ಇಲ್ಲಿ ಓದಿದ್ದರಿಂದ ಒಂದಷ್ಟು ಜನರ ಜೊತೆ ಓಡಾಡಿದ್ದರಿಂದ ಆದ ಅನುಭವಗಳನ್ನು ಹಿಡಿದುಕೊಂಡು ಉತ್ತರವನ್ನು ಕೊಟ್ಟುಬಿಟ್ಟೆ ಸರಿಯೋ ತಪ್ಪೋ ಗೊತ್ತಿಲ್ಲ" ಈ ಬದುಕು ಅಂದ್ರೆ ನಾವು ಹೇಗೆ ಯೋಚಿಸುತ್ತೇವೆ ಹಾಗೆ ಕಣ್ಣ ಮುಂದೆ ಕಾಣಿಸುವುದಕ್ಕೆ ಆರಂಭ ಆಗುತ್ತೆ . ಆ ಕ್ಷಣ ಅಯ್ಯೋ ನನ್ನ ಜೀವನವೇ ಬದುಕಲ್ಲಿ ಏನು ಇಲ್ವಲ್ಲ ಅಂತ ಅನಿಸಿದರೆ ಬದುಕಲ್ಲಿ ಏನು ಇರುವುದಿಲ್ಲ ಅಥವಾ ಈ ಬದುಕಲ್ಲಿ ಎಲ್ಲವೂ ಇದೆ, ಇನ್ನು ಏನು ಆರಂಭವಾಗಿಲ್ಲ ಇನ್ನು ಆರಂಭವಾಗಬೇಕು ನಾನು ಪ್ರತಿಯೊಂದು ಕ್ಷಣವನ್ನು ಅನುಭವಿಸಿ ಬದುಕಬೇಕು ಅಂದುಕೊಂಡಾಗ  ಬದುಕು ಆರಂಭವಾಗುತ್ತೆ. ಇಲ್ಲಿ ಬದುಕಿನ ಒಂದಷ್ಟು ಮುಖಗಳು ಮಾತ್ರ ಪರಿಚಯವಾಗುತ್ತದೆ. ನಾವು ಬದುಕುತ್ತಾ ಹೋದ ಹಾಗೆ ಬದುಕಿನ ಹೊಸ ಮುಖಗಳು ಹಳೆ ಮುಖಗಳು ಎಲ್ಲವೂ ಮತ್ತೆ ಸಿಗುತ್ತವೆ, ಅದಕ್ಕೆ ಬದುಕು ಅನ್ನೋದು ಯೋಚಿಸಿದಂತಲ್ಲ, ಪ್ರತಿ ಹೆಜ್ಜೆಯಲ್ಲೂ ಪ್ರತಿ ತಿರುವಿನಲ್ಲಿ ಹೊಸ ಬದಲಾವಣೆ ಹೊಸ ಅವಕಾಶದೊಂದಿಗೆ ಕಾಯುತ್ತಿರುತ್ತದೆ ಹಾಗಾಗಿ ಚಲನೆ‌ ನಿರಂತರವಾಗಿರಬೇಕು...ಅಯ್ಯೋ ನಾನು ಬೋಧನೆ ಮಾಡ್ತಾ ಇದ್ದೀನಿ ಅನ್ನಿಸಿತು.. ಹೌದಾ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ