ಸ್ಟೇಟಸ್ ಕತೆಗಳು (ಭಾಗ ೬೪೩) - ಗಡಿಯಾರ
ಅವನೊಬ್ಬ ಹುಡುಗ. ಯಾವುದನ್ನು ಕೂಡ ಬಾಯಿ ಮಾತಿನಲ್ಲಿ ಹೇಳಿದರೆ ಅರ್ಥವೇ ಆಗುವುದಿಲ್ಲ, ಪ್ರತಿಯೊಂದು ಉದಾಹರಣೆ ಇಟ್ಟು ಅರ್ಥ ಮಾಡಿಸಬೇಕು. ಇವತ್ತು ಬದುಕು ಅಂದ್ರೆ ಹೇಗೆ ಅಂತ ಕೇಳಿದ್ದಕ್ಕೆ ಕಣ್ಣಮುಂದೆ ಇರುವ ಬೇರೆ ಬೇರೆ ಬದುಕಿನ ರೀತಿಗಳನ್ನ ತೋರಿಸಿದರೂ ಆತನಿಗದು ಅರ್ಥವಾಗಲಿಲ್ಲ. ಆಗ ಗಂಟೆ 11 ಬಡಿದಿದ್ದರಿಂದ ಅದನ್ನೇ ಮಾತನಾಡೋಣ ಎಂದೆನಿಸಿ ನೋಡು ಗಡಿಯಾರದ ರೀತಿ ನಮ್ಮ ಬದುಕು, ಸಣ್ಣ ಸಂಖ್ಯೆಯಿಂದ ದೊಡ್ಡ ಸಂಖ್ಯೆಯವರೆಗೂ ಬದಲಾಗುತ್ತಲೇ ಇರುತ್ತದೆ. ನಿಮಿಷದ ಮುಳ್ಳಾದರೂ ಚಲನೆ ಸ್ವಲ್ಪ ವೇಗ ಆದರೂ ಎಲ್ಲಾ ಹೆಜ್ಜೆಗಳನ್ನ ಮತ್ತೆ ಮತ್ತೆ ದಾಟಿಕೊಂಡು ಹೋಗಲೇಬೇಕು, ಗಂಟೆಯ ಮುಳ್ಳು ನಿಧಾನವಾದರೂ ಪ್ರತಿ ಹೆಜ್ಜೆಗೂ ತುಂಬಾ ಮೌಲ್ಯವಿದೆ. ಗಡಿಯಾರದ ಮುಳ್ಳಿನ ಹಾಗೆ ಆದರೆ ಕೆಲವೊಂದು ಸಲ ಹೋದ ದಾರಿಯಲ್ಲಿ ಮತ್ತೆ ಬರಬೇಕಾಗಬಹುದು ಹೊಸ ಅನುಭವ ಹೊಸ ವಿಚಾರಗಳನ್ನು ಪಡೆದುಕೊಂಡು ಸಮಯ ತೋರಿಸುವಂತಹ ಅದ್ಭುತ ಕೆಲಸವನ್ನು ಮಾಡ್ತಾ ಇದ್ರು ಕೂಡ ಆಗೊಮ್ಮೆ ಗಡಿಯಾರದ ಬ್ಯಾಟರಿ ನಿಂತು ಬಿಟ್ಟರೆ ಏನೇ ಮಾಡಿದರೂ ಗಡಿಯಾರ ಚಲಿಸುವುದಿಲ್ಲ ಹೀಗೆ ಕೆಲವೊಂದು ಸಮಸ್ಯೆಗಳು ಚಲಿಸಿದಂತೆ ನಿಲ್ಲಿಸಿ ಬಿಡುತ್ತವೆ ಆದರೂ ಮೈ ಕೊಡವಿ ಮೇಲೆದ್ದು ಮತ್ತೆ ನಡೆಯಬೇಕು ಹೊಸತೊಂದು ಬದುಕಿನ ದಾರಿ ಕಣ್ಣಮುಂದೆ ಇದೆ ಅಂದುಕೊಂಡು ಚಲಿಸುತ್ತಿರಬೇಕು, ಇಲ್ಲವಾದರೆ ಮೂಲೆ ಸೇರಬೇಕಾದೀತು
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ