ಸ್ಟೇಟಸ್ ಕತೆಗಳು (ಭಾಗ ೬೪೭) - ತಡಗೋಡೆ

ಸ್ಟೇಟಸ್ ಕತೆಗಳು (ಭಾಗ ೬೪೭) - ತಡಗೋಡೆ

ಆ ಊರನ್ನ ತಲುಪೋಕೆ ಹಲವು ಕಿಲೋಮೀಟರ್ ಗಳನ್ನು ಬಳಸಿ ರಸ್ತೆ ಒಂದು ಹಾದು ಹೋಗಿತ್ತು. ಊರಲ್ಲೊಂದು ಸಣ್ಣ ನದಿ, ಆ ನದಿಗೊಂದು ಸೇತುವೆ ಹಾಕಿದ್ರೆ ಈ ಬದಿಯ ಊರಿನವರಿಗೆಲ್ಲ ತುಂಬಾ ಹತ್ತಿರದ ಪಯಣ. ಅದಕ್ಕಾಗಿ ಸರಕಾರ ಮೊದಲೆ ನಿಗದಿ ಮಾಡಿದ್ದ ಸ್ಥಳವೊಂದರಲ್ಲಿ ಸೇತುವೆ ನಿರ್ಮಾಣಕ್ಕೆ ಅನುಮತಿ ತೆಗೆದುಕೊಂಡು ಸೇತುವೆಯನ್ನು ನಿರ್ಮಿಸಿಯೇಬಿಟ್ಟರು. ಸೇತುವೆ ನಿರ್ಮಾಣ ಆಗಿ ಊರಿಗೆ ಹತ್ತಿರದಿಂದ ರಸ್ತೆ ಸಿಗುತ್ತೆ, ಪಯಣ ಸುಲಭವಾಗುತ್ತೆ ಅಂದುಕೊಳ್ಳುವಾಗ ಸೇತುವೆಯ ಪಕ್ಕದ ರಸ್ತೆಯ ಬದಿಯ ಮನೆಯವರು ಹೊಸತೊಂದು ತಗಾದೆ ತೆಗೆದುಬಿಟ್ಟರು. ಈ ರಸ್ತೆಯಲ್ಲಿ ವಾಹನಗಳು ಹಾದುಹೋಗುವಾಗ ಮನೆಗೆ ತುಂಬಾ ತೊಂದರೆ ಆಗುತ್ತೆ ಹಾಗಾಗಿ ನೀವೊಂದು ತಡೆಗೋಡೆ ಕಟ್ಟಿಕೊಡಬೇಕು, ಸರಕಾರ ಒಪ್ಪಿಗೆಯನ್ನೂ ಸೂಚಿಸಿತು. ನಾಲ್ಕು ಅಡಿ ಎತ್ತರದ ತಡೆಗೋಡೆಯೊಂದನ್ನು ನಿರ್ಮಾಣ ಮಾಡುವ ಜವಾಬ್ದಾರಿಯನ್ನು ವಹಿಸಿಕೊಂಡು ನಿರ್ಮಾಣವೂ ಮಾಡಿಬಿಟ್ಟಿತ್ತು. ಆಸೆ ಅಲ್ಲಿಗೆ ನಿಲ್ಲುವುದಿಲ್ಲ ಅಲ್ವಾ? ನಾಲ್ಕು ಅಡಿ ಇದ್ದದ್ದು ಎಂಟು ಅಡಿ ಬೇಕು ಅಂತಲೇ ಅವರ ಗಲಾಟೆ ಜೋರಾಯಿತು. ವಿಚಾರ ಪೊಲೀಸ್ ಸ್ಟೇಷನ್ ಇನ್ನೇನು ಕೆಲವೇ ದಿನ ನ್ಯಾಯಾಲಯದ ಕಡೆಗೂ ಹೋಗಿಬಿಟ್ಟರೆ, ಆ ಸೇತುವೆ ಬಳಕೆಗೆ ಜನ್ರಿಗೆ ಅನುಮತಿ ಸಿಗುತ್ತೋ ಇಲ್ವೋ ಅನ್ನೋದು ತೀರ್ಮಾನವಾಗುವುದಕ್ಕೆ ಮತ್ತೆ ಹಲವು ಸಮಯ ಹಿಡಿಯುತ್ತೆ. ಬದುಕ್ತಾ ಇರೋದು ಮನುಷ್ಯರ ನಡುವೆ ಸಹಾಯ ಆಗುತ್ತಿರುವುದು ಮನುಷ್ಯರಿಗೆ ಎಲ್ಲ ವಿಚಾರದಲ್ಲೂ ಅಣ್ಣ ತಮ್ಮಂದಿರು ಅಂತ ಭಾಷಣ ಮಾಡುವವರು ಊರವರಿಗೆ ಸಾಗುವುದಕ್ಕೆ ಸ್ಥಳಾವಕಾಶವನ್ನು ಕೊಡದೆ ತಾವೇನೋ ಅದ್ಭುತವಾದ ಸಾಧಿಸೋ ಹೊರಟಿದ್ದಾರೆ. ಮುಂದೊಂದು ದಿನ ಕಷ್ಟದ ಸಂದರ್ಭದಲ್ಲಿ ಜೊತೆಗೆ ನಿಲ್ಲಿಬೇಕಾದವರು ಮುಖ ತಿರುಗೀಸಿದರೆ. ಎಚ್ಚರಿಕೆ ಗಂಟೆ ಅವರ ಕಣ್ಣ ಮುಂದೆ ಇದ್ದರೂ ಕೂಡ ಅಹಂಕಾರದ ಮುಂದೆ ಪ್ರೀತಿ ಎಲ್ಲೂ ಕಾಣಿಸ್ತಾ ಇಲ್ಲ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ